ಬೆಳಗೋಡು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗಳ ಸ್ಪರ್ಧೆ.

Share with

ಸಕಲೇಶಪುರ: ಮೈತ್ರಿಕೂಟದ ಟಿಕೆಟ್ ಯಾರಿಗೆ? ಚೈತ್ರಾ ಉದೇಶ್, ಬಬಿತಾ ಅಥವಾ ವಿಶ್ವನಾಥ್ ನಡುವೆ ಪೈಪೋಟಿ!

ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗೋಡು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಎನ್‌ಡಿಎ ಅಭ್ಯರ್ಥಿ ಮೈತ್ರಿಕೂಟದ ಟಿಕೆಟ್ ಯಾರಿಗೆ ಲಭಿಸಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಜೆಡಿಎಸ್ ಪಕ್ಷದ ಚೈತ್ರಾ ಉದೇಶ್, ಬಿಜೆಪಿಯ ಬಬಿತಾ ಹಾಗೂ ವಿಶ್ವನಾಥ್ ಅವರ ಹೆಸರುಗಳು ಟಿಕೆಟ್ ಆಕಾಂಕ್ಷಿಗಳಾಗಿ ಕೇಳಿಬರುತ್ತಿದ್ದು, ಮೈತ್ರಿಕೂಟದ ನಾಯಕರು ಅಂತಿಮವಾಗಿ ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದು ಇದೀಗ ಎಲ್ಲರ ಗಮನ ಸೆಳೆದಿದೆ. ಟಿಕೆಟ್ ಪಡೆಯಲು ಆಕಾಂಕ್ಷಿಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು, ಮೈತ್ರಿಕೂಟದ ವರಿಷ್ಠರ ನಿರ್ಧಾರಕ್ಕಾಗಿ ರಾಜಕೀಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾಯುತ್ತಿದ್ದಾರೆ. ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಅಧಿಕೃತ ಘೋಷಣೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ.


Share with

Tags:

Leave a Reply

Your email address will not be published. Required fields are marked *