ಸಿಯೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾನ್ ಉನ್ ನಿಧನರಾಗಿದ್ದಾರೆ ಎಂಬ ಸುದ್ದಿ ಅಲ್ಲಿನ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಚೀನಾ ಡೆಮಾಕ್ರಟಿಕ್ ಪಾರ್ಟಿಯ ಅಧ್ಯಕ್ಷ ವುಂಜುನ್ ಕ್ಸಿ ಅವರು ಟ್ವಿಟ್ ಮಾಡಿ, ಮೆದುಳಿನ ತೀವ್ರ ರಕ್ತಸ್ರಾವಕ್ಕೆತುತ್ತಾಗಿದ್ದು, ಅವರು ಕೋಮಾಕ್ಕೆ ಜಾರಿದ್ದಾರೆ.
ಚೀನಾದ ಪೆಕಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಜ್ಞರ ತಂಡವೊಂದನ್ನು ಉತ್ತರ ಕೊರಿಯಾಕ್ಕೆ ರವಾನಿಸಲಾಗಿದ್ದು ಅವರು ಕಿಮ್ ಚಿಕಿತ್ಸೆಯಲ್ಲಿ ನೆರವಾಗುತ್ತಿದ್ದಾರೆಂದು ಹೇಳಿದ್ದಾರೆ. ಆದರೆ, ಉತ್ತರ ಕೊರಿಯಾ ಈ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ, ಉತ್ತರ – ದಕ್ಷಿಣ ಕೊರಿಯಾ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ವರದಿಯಾಗಿದೆ.




