ವಿವಾದಿತ ಚಪ್ಪರ ತೆರವಿಗೆ ಅಧಿಕಾರಿಗಳ ಆಗಮನ: ತಡೆಯಲು ಸಜ್ಜಾದ ಜನರು

Share with

ಜೋಡುಕಲ್ಲು: ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ನಡೆಯುವ ಜಾಗದಲ್ಲಿ ನಿರ್ಮಿಸಿರುವ ನಡಯುವ ಜಾಗದ ನಿಮಿತ್ತ ಸಭಾಂಗಣ ಹಾಗೂ ಮಾರುಕಟ್ಟೆಯ ಚಪ್ಪರ ತೆರವುಗೊಳಿಸುವ ವಿಚಾರವಾಗಿ ಅಧಿಕಾರಿಗಳು ಬರುವರೆಂಬ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರು. ಚಪ್ಪರ ತೆರವುಗೊಳಿಸುವ ಸಂಬಂಧ ಯಾವುದೇ ಕಾರಣಕ್ಕೂ ಅವಕಾಶ ನೀಡದೆ, ಪ್ರತಿರೋಧ ವ್ಯಕ್ತಪಡಿಸಿ ಧಾರ್ಮಿಕ ಭೂಮಿಯ ಚಪ್ಪರ ಸಂರಕ್ಷಣೆಗಾಗಿ ಸಂಘರ್ಷಣಾ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಹೈಕೋರ್ಟ್ ಆದೇಶದಂತೆ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಲೋಕೋಪಯೋಗಿ ರಸ್ತೆ ವಿಭಾಗದ ಅಧಿಕಾರಿಗಳಿಗೆ ಚಪ್ಪರ ತೆರವು ಕಾರ್ಯಾಚರಣೆ ನಡೆಸಲು ಆದೇಶಿಸಲಾಗಿದೆ. ಆದರೆ, ಇಂದಿಗೂ ಅಧಿಕಾರಿಗಳು ಬರುವವರೆಗೂ ಕಾಯುತ್ತಾ ಮುಂಜಾನೆ ಜಾಗದಲ್ಲಿಯೇ ಜೋಡಿಸಲ್ಪಟ್ಟಿದ್ದ ಸಂಘ ಪರಿವಾರದ ಕಾರ್ಯಕರ್ತರು ಬೀಡುಬಿಟ್ಟಿದ್ದಾರೆ. ಮಹಿಳೆಯರೂ ಸೇರಿದಂತೆ ಭಾರಿ ಸಂಖ್ಯೆಯ ಜನರು ಜಮಾಯಿಸಿದ್ದು, ಭಜನೆ, ಶ್ರೀರಾಮ ನಾಮ ತಾರಕ ಜಪಯಜ್ಞ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಸ್ಥಳದಲ್ಲಿ ಭದ್ರತೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ರಕ್ಷಣಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇಲ್ಲಿನ ಎಲ್ಲಾ ದಾರಿಗಳಲ್ಲೂ ಜನಜಮಾವಣೆ ಹೆಚ್ಚಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಾರ್ವಜನಿಕ ಗಣೇಶೋತ್ಸವ, ಶ್ರೀಕೃಷ್ಣ ಜಯಂತಿ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸಿದೆ. ಇದರಿಂದ ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲವಾಗಿದೆ. ಪೊಲೀಸ್ ಇಲಾಖೆಯ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಕರ್ತವ್ಯನಿಷ್ಠೆ ಸಾರ್ವಜನಿಕರ ಗಮನ ಸೆಳೆದಿವೆ.


Share with

Tags:

Leave a Reply

Your email address will not be published. Required fields are marked *