ಸುಳ್ಯ: ರಾಷ್ಟ್ರೀಯ ಹೆದ್ದಾರಿ 275ರ ಗೂನಡ್ಕ ಶಾರದಾ ಶಾಲೆಯ ಬಳಿ ಕಾರು ಮತ್ತು ಲಾರಿ ನಡುವೆ ರವಿವಾರ(ಅ.25) ಭೀಕರ ಅಪಘಾತ ಸಂಭವಿಸಿದ್ದು, ಬಾಲಕ ಮೃತಪಟ್ಟಿದ್ದು ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಾರಿನಲ್ಲಿದ್ದವರು ಪುಣಚ ಮೂಲದವರು ಎನ್ನಲಾಗಿದೆ. ಗಾಯಾಳುಗಳು ಮತ್ತು ಮೃತ ಬಾಲಕನ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.




