ಬೆಂಗಳೂರು ಕಂಬಳ ಕರೆ ವೀಕ್ಷಣೆ ಮಾಡಿದ ಸಚಿವ ದಿನೇಶ್‌ ಗುಂಡೂರಾವ್‌

Share with

ಪುತ್ತೂರು: ನ.24, 25 ಮತ್ತು 26ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳದ ಕರೆ ನಿರ್ಮಾಣ ಕಾಮಗಾರಿಯನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವೀಕ್ಷಣೆ ಮಾಡಿದರು.

ಕಂಬಳದ ಕರೆ ನಿರ್ಮಾಣ ಕಾಮಗಾರಿಯನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವೀಕ್ಷಣೆ ಮಾಡಿದರು.

ಶುಕ್ರವಾರ(ನ.3) ಮಧ್ಯಾಹ್ನ ಅರಮನೆ ಮೈದಾನಕ್ಕೆ ಭೇಟಿ ನೀಡಿದ ಅವರು ಕರೆ ವೀಕ್ಷಣೆ ಮಾಡಿ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ , ಪುತ್ತೂರು ಶಾಸಕ ಅಶೋಕ್ ರೈ ಜೊತೆ ಚರ್ಚೆ ನಡೆಸಿದರು. ಕಂಬಳ ವೀಕ್ಷಣೆಗೆ ಲಕ್ಷಾಂತರ ಮಂದಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಲ್ಲಿ ನಡೆಯುತ್ತಿರುವ ಇತರೆ ಕಾಮಗಾರಿಗಳನ್ನು ಸಚಿವರು ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಕಂಬಳ ಸಮಿತಿ ಅಧ್ಯಕ್ಷರೂ, ಪುತ್ತೂರು ಶಾಸಕರೂ ಆದ ಅಶೋಕ್ ರೈ, ಮಾಜಿ ಕಾರ್ಪೋರೇಟರ್ ಉಮೇಶ್ ಶೆಟ್ಟಿ, ಪ್ರಮುಖರಾದ ಗುಣರಂಜನ್ ಶೆಟ್ಟಿ, ಮುರಳೀದರ್ ರೈ ಮಠಂತಬೆಟ್ಟು ಸೇರಿದಂತೆ ಕಂಬಳ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *