ಉಪ್ಪಳ: ಬ್ಯಾಂಕ್ ಸಾಲ ಮರುಪಾವತಿ ಅದಾಲತ್

Share with

ಉಪ್ಪಳ: ಪೈವಳಿಕೆ ಗ್ರೂಪ್ ವಿಲ್ಲೇಜಿಗೆ ಒಳಪಟ್ಟ ಪೈವಳಿಕೆ ಹಾಗೂ ಚಿಪ್ಪಾರ್ ವಿಲ್ಲೇಜ್ ಗಳಲ್ಲಿ ಬ್ಯಾಂಕ್ ಸಾಲ ಪಾವತಿಸಲು ಬಾಕಿ ಇದ್ದವರಿಗಾಗಿ ಬ್ಯಾಂಕ್ ಸಾಲ ಮರುಪಾವತಿ ಅದಾಲತ್ತನ್ನು ಪೈವಳಿಕೆ ಗ್ರೂಪ್ ವಿಲೇಜ್ ಆಫೀಸ್ ನಲ್ಲಿ ನ.15ರಂದು ನಡೆಸಲಾಯಿತು.

ಬ್ಯಾಂಕ್ ಸಾಲ ಮರುಪಾವತಿ ಅದಾಲತ್ತನ್ನು ಪೈವಳಿಕೆ ಗ್ರೂಪ್ ವಿಲೇಜ್ ಆಫೀಸ್ ನಲ್ಲಿ ನಡೆಸಲಾಯಿತು.

ಅದಾಲತ್ತಿನಲ್ಲಿ ಕೆನರಾ ಬ್ಯಾಂಕ್ ಪೈವಳಿಕೆ ಬ್ರಾಂಚ್, ಕೇರಳ ಗ್ರಾಮೀಣ ಬ್ಯಾಂಕ್, ಸಜಂಕಿಲ ಬ್ರಾಂಚ್ ಬಾಯಾರ್ ಪದವು, ಕೇರಳ ಬ್ಯಾಂಕ್ ಉಪ್ಪಳ ಬ್ರಾಂಚ್ ಎಂಬಿ ಬ್ಯಾಂಕುಗಳಲ್ಲಿ ಒಳಪಟ್ಟ ಸಾಲಗಾರರು ಭಾಗವಹಿಸಿದರು.

ತಹಸಿಲ್ದಾರ್, ರೆವೆನ್ಯೂ ರೆಕವರಿ ಕಾಸರಗೋಡು ಶಿಬು, ಕೆನರಾ ಬ್ಯಾಂಕ್ ಪೈವಳಿಕೆ ಶಾಖೆ ಮೆನೇಜರ್ ಪ್ರವೀಣ್ ಕುಮಾರ್, ಕೇರಳ ಗ್ರಾಮೀಣ ಬ್ಯಾಂಕ್, ಸಜಂಕಿಲ ಶಾಖೆ ಬಾಯಾರು ಪದವು ಮ್ಯಾನೇಜರ್ ಉಮಾಪತಿ, ಪೈವಳಿಕೆ ಗ್ರೂಪ್ ವಿಲೇಜ್ ಆಫೀಸರ್ ಮೊಯಿದೀನ್ ಕುಂಞಿ ಹಾಗೂ ವಿಲೇಜ್ ಸಿಬ್ಬಂದಿಗಳಾದ ನವ್ಯ, ಬೈಜು , ಅಶ್ವಿತ್ ಮುಂತಾದವರು ನೇತೃತ್ವ ನೀಡಿದರು. ಒಟ್ಟು 15 ಕೇಸುಗಳಲ್ಲಿತೀರ್ಪು ಮಾಡಲಾಯಿತು.


Share with

Leave a Reply

Your email address will not be published. Required fields are marked *