ಡಿ.23-25: ಮಜಿಬೈಲು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಶ್ರೀ ದೇವರ ನೂತನ ರಜತ ಛಾಯಾ ಬಿಂಬ ಪ್ರತಿಷ್ಟೆ ಹಾಗೂ ಸಾನಿಧ್ಯ ಕಲಶಾಭಿಷೇಕ

Share with

ಮಂಜೇಶ್ವರ: ಮಜಿಬೈಲು ಶ್ರೀ ಅಯ್ಯಪ್ಪ ಭಜನಾ ಮಂದಿರದ ಶ್ರೀ ದೇವರ ಪುನ: ಪ್ರತಿಷ್ಟೆ ಹಾಗೂ ಸಾನಿಧ್ಯ ಕಲಶಾಭಿಷೇಕ ಡಿ.23ರಿಂದ 25ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಮಜಿಬೈಲು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಶ್ರೀ ದೇವರ ನೂತನ ರಜತ ಛಾಯಾ ಬಿಂಬ ಪ್ರತಿಷ್ಟೆ

23ರಂದು ಸಂಜೆ 4ಕ್ಕೆ ಹೊಸಂಗಡಿ ಶ್ರೀ ಅಯ್ಯಪ್ಪ ಕೃಪಾ ವೀರಮಾರುತಿ ವ್ಯಾಯಾಮ ಶಾಲೆ ಬಳಿಯಿಂದ ಹೊರೆಕಾಣಿಕೆ, 6ಕ್ಕೆ ಸಾಮೂಹಿಕ ಪ್ರಾರ್ಥನೆ, ವಿವಿಧ ವೈಧಿಕ ಕಾರ್ಯಕ್ರಮಗಳು. 24ರಂದು ಬೆಳಿಗ್ಗೆ 108 ತೆಂಗಿನ ಕಾಯಿಗಳ ಮಹಾಗಣಪತಿ ಹೋಮ, ಶಾಂತಿ ಹೋಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 2ರಿಂದ 3ಗಂಟೆ ತನಕ ಭಜನೆ, ಸಂಜೆ 5ರಿಂದ ವಿವಿಧ ವೈಧಿಕ ಕಾರ್ಯಕ್ರಮ, ರಾತ್ರಿ 7.30ಕ್ಕೆ ಅನ್ನಸಂತರ್ಪಣೆ, ರಾತ್ರಿ 8ರಿಂದ ನಡೆಯುವ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ ಕಾರ್ಯಕ್ರಮವನ್ನು ಶ್ರೀ ಭಗವತೀ ಕ್ಷೇತ್ರ ಪಟ್ಟತ್ತೂರು ಇದರ ನಾರಾಯಣ ಭಗವತೀ ಪೂಜಾರಿರವರು ದೀಪ ಪ್ರಜ್ವಲನೆಗೊಳಿಸಿ, ಆಶೀರ್ವಚನ ನೀಡುವರು. ಸಂಜೀವ ಬಂಗೇರ ಅಧ್ಯಕ್ಷತೆ ವಹಿಸುವರು.

ಕೊರಗಪ್ಪ ಮಜಿಬೈಲು, ವಿಜಯ ಬೆಜ್ಜ, ಪಿ.ಬಾಬು ಮಜಿಬೈಲು ಉಪಸ್ಥಿತರಿರುವರು. ರಾತ್ರಿ 8.30ಕ್ಕೆ ಭಕ್ತಿ ಪ್ರಧಾನ ತುಳು ನಾಟಕ ಪ್ರದರ್ಶನಗೊಳ್ಳಲಿದೆ. 25ರಂದು ಬೆಳಿಗ್ಗೆ 7ರಿಂದ ಗಣಹೋಮ, ಪ್ರಾಯಶ್ಚಿತ ಹೋಮ, 9.13ರಿಂದ 10.13ರೊಳಗಿನ ಮುಹೂರ್ತದಲ್ಲಿ ಶ್ರೀ ದೇವರುಗಳ ನೂತನ ರಜತ ಛಾಯಾ ಬಿಂಬದ ಪ್ರತಿಷ್ಟಾಪನೆ, ಕಲಶಾಭಿಷೇಕ ಪೂಜೆ, 10.30ಕ್ಕೆ ಭಕ್ತಿ ಸಂಗೀತ, 12.30ಕ್ಕೆ ಮಹಾಪೂಜೆ ಹಾಗೂ ನಿತ್ಯ ನೈಮಿತ್ತಕ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, 2.30ರಿಂದ ಕುಣಿತ ಭಜನಾ ಸೇವೆ, 5ಕ್ಕೆ ಸ್ಥಳೀಯ ಮಕ್ಕಳಿಂದ ನಾಟ್ಯ ವೈಭವ ನೃತ್ಯ ಕಾರ್ಯಕ್ರಮ, ಸಂಜೆ 7.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಮಂದಿರದ ಅಧ್ಯಕ್ಷ ಸಂಜೀವ ಬಂಗೇರ ಅಧ್ಯಕ್ಷತೆ ವಹಿಸುವರು. ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ವಸಂತ ಪೈ ಬದಿಯಡ್ಕ ಸಹಿತ ವಿವಿಧ ಗಣ್ಯರು ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 9ಕ್ಕೆ ನಾಟ್ಯ ನೈವೇದ್ಯಂ ನಡೆಯಲಿದೆ.


Share with

Leave a Reply

Your email address will not be published. Required fields are marked *