ಡಿ.30: ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ 52ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪ ದೀಪೋತ್ಸವ

Share with

ಉಪ್ಪಳ: ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ 52ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ ಡಿ.30ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಶಬರಿಮಲೆ ಶ್ರೀ ಅಯ್ಯಪ್ಪ ದೀಪೋತ್ಸವ

ಪೂರ್ವಾಹ್ನ 5ಕ್ಕೆ ಗಣಪತಿ ಹೋಮ, ಬೆಳಿಗ್ಗೆ 6.30ಕ್ಕೆ ಹರಿನಾಮ ಕೀರ್ತನೆ, 8ರಿಂದ ಭಜನೆ ಸಂಕೀರ್ತನೆ, 10.30ಕ್ಕೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ಮಧ್ಯಾಹ್ನ 12 ಮಹಾಪೂಜೆ, 12.30ರಿಂದ ಅನ್ನದಾನ, ಸಂಜೆ 4ರಿಂದ ಕುಣಿತ, ಕುಣಿತ ಭಜನೆ, ಸಂಜೆ 6ರಿಂದ ಪಾಲೆಕೊಂಬು ಮೆರವಣಿಗೆ ಅಂಬಾರು ಶ್ರೀ ಸದಾಶಿವ ಕ್ಷೇತ್ರದಿಂದ ಉತ್ಸವಾಂಗಣಕ್ಕೆ, ರಾತ್ರಿ ನೃತ್ಯ ಸಂಗಮ, ರಾತ್ರಿ 8ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಬ್ರಹ್ಮಶ್ರೀ ಮಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಆಶೀರ್ವಚನ ನೀಡುವರು. ರವೀಂದ್ರ ಶೆಟ್ಟಿ ಉಳಿದೊಟ್ಟು ಅಧ್ಯಕ್ಷತೆ ವಹಿಸುವರು.

ಉದ್ಯಮಿ ಪಿ.ಆರ್.ಶೆಟ್ಟಿ ಕುಳೂರು, ಕರ್ನಾಟಕ ಸರಕಾರ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಸೇವಾರತ್ನ ಯು.ಎಂ ಭಾಸ್ಕರ ರವರನ್ನು ಗೌರವಿಸಲಾಗುವುದು. ರಾತ್ರಿ 11ರಿಂದ ಶಬರಿಮಲೆ ಸ್ವಾಮಿ ಅಯ್ಯಪ್ಪ ಪೌರಾಣಿಕ ಯಕ್ಷಗಾನ ಪ್ರದರ್ಶನ, ರಾತ್ರಿ 12.30ರಿಂದ ದೀಪಾರಾಧನೆ, ತಾಯಂಬಕ, 3ರಿಂದ ಶ್ರೀ ಅಯ್ಯಪ್ಪನ್ ಗೀತೆ, ರಾತ್ರಿ 3.45ರಿಂದ ಹಣತೆ ದೀಪ ಮೆರವಣಿಗೆ, ಪ್ರಾತಕಾಲ 5ರಿಂದ ಅಗ್ನಿಪೂಜೆ, 5.30ರಿಂದ ಶ್ರೀ ಅಯ್ಯಪ್ಪನ್ ಮತ್ತು ವಾವರ ಯುದ್ದ ಕಾರ್ಯಕ್ರಮಗಳು ನಡೆಯಲಿದೆ.


Share with

Leave a Reply

Your email address will not be published. Required fields are marked *