ಬಂಟ್ವಾಳ: ಹಟ್ಟಿಯ ಹೊರಗಡೆ ಕಟ್ಟಿ ಹಾಕಿದ್ದ ಸಣ್ಣ ಕರುವನ್ನು ಚಿರತೆವೊಂದು ಕೊಂದು ತಿಂದ ಘಟನೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.20ರಂದು ನಡೆದಿದೆ ಎಂದು ವರದಿಯಾಗಿದೆ.


ನೈನಾಡು ವಿಠಲ ಶೆಟ್ಟಿ ಎಂಬವರ ಮನೆಯ ಸುಮಾರು 6 ತಿಂಗಳ ಕರುವನ್ನು ಚಿರತೆ ಕೊಂದು ಅರ್ಧ ತಿಂದು ಹಾಕಿದೆ ಎನ್ನಲಾಗಿದೆ. ಮನೆಯ ಸಮೀಪದಲ್ಲಿರುವ ಹಟ್ಟಿಯ ಹೊರಗಡೆ ಈ ಕರುವನ್ನು ಕಟ್ಟಿ ಹಾಕಿದ್ದು ಮಧ್ಯರಾತ್ರಿ ವೇಳೆ ಚಿರತೆ ಕರುವನ್ನು ಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ.




