ಮಂಜೇಶ್ವರ: ರಾಮಯ್ಯ ಶೆಟ್ಟಿಯವರ 21ನೇ ಚರಮ ವಾರ್ಷಿಕ ದಿನಾಚರಣೆ

Share with

ಮಂಜೇಶ್ವರ: ಸಿಪಿಐಎಂ ಪಕ್ಷವನ್ನು ತುಳುನಾಡಿನ ಮಣ್ಣಿನಲ್ಲಿ ಕಟ್ಟಿ ಬೆಳೆಸುವಲ್ಲಿಯೂ ಹಲವಾರು ಹೋರಾಟಗಳಿಗೆ ನೇತೃತ್ವ ನೀಡಿಯೂ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಜನಪರ ನಾಯಕ ರಾಮಯ್ಯ ಶೆಟ್ಟಿಯವರ 21ನೇ ಚರಮ ವಾರ್ಷಿಕ ದಿನಾಚರಣೆ ಹೊಸಬೆಟ್ಟು ಗುಡ್ಡೆಕ್ಕೇರಿ ಬೋಳ್ನಾಡುಗುತ್ತು ಅವರ ಮನೆ ಸಮೀಪ ನಡೆಯಿತು.

ರಾಮಯ್ಯ ಶೆಟ್ಟಿಯವರ 21ನೇ ಚರಮ ವಾರ್ಷಿಕ ದಿನಾಚರಣೆ ಹೊಸಬೆಟ್ಟು ಗುಡ್ಡೆಕ್ಕೇರಿ ಬೋಳ್ನಾಡುಗುತ್ತು ಅವರ ಮನೆ ಸಮೀಪ ನಡೆಯಿತು.

ಸಭೆಯನ್ನು ಸಿಪಿಐ(ಎಂ) ಮಂಜೇಶ್ವರ ಏರಿಯಾ ಕಾರ್ಯದರ್ಶಿ, ಮಾಜಿ ಶಾಸಕರಾದ ಕೆ.ವಿ ಕುಂಞಿ ರಾಮನ್ ಉದ್ಘಾಟಿಸಿದರು. ಸಿಪಿಐ(ಎಂ) ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಆರ್ ಜಯಾನಂದ ಅಧ್ಯಕ್ಷತೆ ವಹಿಸಿದರು. ಸಿಪಿಐ(ಎಂ) ಮಂಜೇಶ್ವರ ಏರಿಯಾ ಸಮಿತಿ ಸದಸ್ಯರುಗಳಾದ ಡಿ.ಬೂಬ, ಅಬ್ದುಲ್ ರಝಾಕ್ ಚಿಪ್ಪಾರ್, ನವೀನ್ ಕುಮಾರ್, ಗೀತಾ ಸಾಮಾನಿ, ರಾಮಚಂದ್ರ ಖಿ, ಡಿ.ಕಮಲಾಕ್ಷ, ವಿನಯ ಕುಮಾರ್ ಬಾಯರ್, ಪುರುಷೋತ್ತಮ ಬಲ್ಲೂರು, ಪ್ರಶಾಂತ್ ಕನಿಲ, ರವೀಂದ್ರ ಶೆಟ್ಟಿ, ಮಾಜಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಪ್ರಭಾಕರ ಶೆಟ್ಟಿ, ಅಶ್ರಫ್ ಕುಂಜತ್ತೂರ್, ಲೋಕೇಶ್ ಚಿನಾಲ, ಸಿಪಿಐ(ಎಂ) ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಹಾಗೂ ಬಿ.ಎಂ ರಾಮಯ್ಯ ಶೆಟ್ಟಿಯವರ ಪುತ್ರ ಬಿ.ಎಂ ಕರುಣಾಕರ ಶೆಟ್ಟಿ, ಬಿ.ಎಂ ರಾಮಯ್ಯ ಶೆಟ್ಟಿಯವರ ಪತ್ನಿ ವಾರಿಜ ಶೆಟ್ಟಿ ಹಾಗೂ ಕುಟುಂಬಸ್ಥರು, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಸುಳ್ಯಮೆ, ಮಂಜೇಶ್ವರ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಧಾ ಎಂ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿಜಯ ಕನಿಲ ಮೊದಲಾದವರು ಉಪಸ್ಥಿತರಿದ್ದರು. ಕೆ.ಕಮಲಾಕ್ಷ ಸ್ವಾಗತಿಸಿ, ವಂದಿಸಿದರು.


Share with

Leave a Reply

Your email address will not be published. Required fields are marked *