ಪೈವಳಿಕೆ: ಕಯ್ಯಾರು ಪರಂಬಳ ನಿವಾಸಿ ನಾರಾಯಣ ನಾಯ್ಕ್ ರವರ ಪುತ್ರ ಸಂಘ ಪರಿವಾರದ ಸಕ್ರೀಯ ಕಾರ್ಯಕರ್ತ ಗುರುಪ್ರಸಾದ್ [43] ನಿಧನರಾದರು.


ಹಲವು ದಿನಗಳ ಹಿಂದೆ ಅಸೌಖ್ಯ ಬಾಧಿಸಿ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ಜ.7ರಂದು ಮುಂಜಾನೆ ನಿಧನರಾದರು.
ಇಲೆಕ್ಕ್ಟ್ರೀಶನ್ ಉದ್ಯೋಗಿಯಾಗಿದ್ದರು. ಇವರು ಸಂಘ ಪರಿವಾರದಲ್ಲಿ ಸಕ್ರೀಯರಾಗಿದ್ದು, ಬಿಜೆಪಿ ಪರಂಬಳ 116ನೇ ಬೂತ್ ಅಧ್ಯಕ್ಷರಾಗಿದ್ದಾರೆ. ದುರ್ಗಾಶಕ್ತಿ ಕುಣಿತ ಭಜನಾ ಸಂಘ ಪರಂಬಳ ಇದರ ವ್ಯವಸ್ಥಾಪಕರಾಗಿದ್ದರು. ಎ.ಕೆ.ಎಸ್ ಕಯ್ಯಾರು ವಿಲೇಜ್ ಸಮಿತಿ ಅಧ್ಯಕ್ಷರಾಗಿದ್ದರು.
ಮೃತರು ತಂದೆ, ತಾಯಿ ಜಯಂತಿ, ಪತ್ನಿ ಸುಜಾತ, ಪುತ್ರ ವೀಕ್ಷಿತ್, ಸಹೋದರರಾದ ಗೋಪಾಲ, ಸುಭಾಶ್, ಲಕ್ಷ್ಮೀಶ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಬಿಜೆಪಿ ನೇತಾರರಾದ ಲೊಕೋಶ್ ನೊಂಡಾ, ಎ.ಕೆ ಕಯ್ಯಾರ್, ವಿಘ್ನೇಶ್ವರ ಮಾಸ್ತರ್, ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ, ಪ್ರಸಾದ್ ರೈ ಕಯ್ಯಾರ್, ಸುರೇಶ್ ಶೆಟ್ಟಿ ಹೇರೂರು, ಉದಯ ಗಂಭೀರ್, ರೇವತಿ, ಪ್ರಶಾಂತ್ ಪಟ್ಳ, ಅಚ್ಯುತ್ತ ಚೇವಾರು, ದಾಸಪ್ಪ ಸಾಮಾನಿ, ಮೋಹನ್ ಬಲ್ಲಾಳ್, ಎ.ಕೆ.ಎಸ್ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಎಂ.ಚಂದ್ರ ನಾಯ್ಕ್ ಮಾನಿಪ್ಪಾಡಿ, ಪಂಚಾಯತ್ ಸದಸ್ಯರಾದ ಅವಿನಾಶ್, ರಾಜೀವಿ ಶೆಟ್ಟಿಗಾರ್, ಕಯ್ಯಾರ್ ಡಾನ್ಬಾಸ್ಕೋ ಶಾಲೆಯ ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿ ವರ್ಗ ಮತ್ತು ವಿವಿಧ ಪಕ್ಷಗಳ ಕಾರ್ಯಕರ್ತರ ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು. ನಿಧನಕ್ಕೆ ಎ.ಕೆ.ಎಸ್ ಕಯ್ಯಾರು ವಿಲೇಜ್ ಕಮಿಟಿ ಸಂತಾಪ ಸೂಚಿಸಿದೆ.




