ಕಾಸರಗೋಡು: ಇಲ್ಲಿನ ಕುಂಬಳೆ ಇತಿಹಾಸ ಪ್ರಸಿದ್ಧ ಕೇರಳ ಮಲಬಾರ್ ದೇವಸ್ವಾಂ ಬೋರ್ಡ್ ಅಧೀನದಲ್ಲಿರುವ ಅನಂತಪುರ ಅನಂತಪದ್ಮನಾಭ ದೇವಸ್ಥಾನದ 2024-26ರ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ನಡೆದಿದ್ದು ನೂತನ ದೇವಸ್ಥಾನದ ಸಮಿತಿ ಅಧ್ಯಕ್ಷರಾಗಿ ಕುಶಾಲಪ್ಪ ಪೂಜಾರಿ ಕಣ್ಣೂರುರವರು ಆಯ್ಕೆಯಾಗಿದ್ದಾರೆ.


ಟ್ರಸ್ಟಿಗಳಾಗಿ ಪ್ರಸಾದ್ ಕೃಷ್ಣನಗರ ಕುಂಬಳೆ, ಜಯಪ್ರಕಾಶ್ ಶೆಟ್ಟಿ ನಾರಾಯಣಮಂಗಳಂ, ಸತೀಶ್ ಕುಂಬಳೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ನಿರ್ವಹಾಣಾಧಿಕಾರಿ ಸುನಿಲ್ ಕುಮಾರ್ ಉಪಸ್ಥಿತರಿದ್ದರು.




