ಕಾಸರಗೋಡು: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಿಯಾದಲ್ಲಿ ಮಾ.17ರಂದು ಮಧ್ಯಾಹ್ನ ಬೈಕ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ರವಿಚಂದ್ರ ಎಂಬುವರು ಮೃತಪಟ್ಟಿದ್ದಾರೆ.
ಪೇರಾಲ್ ಕಣ್ಣೂರಿನ ತ್ಯಾಂಪಣ್ಣ ಪೂಜಾರಿಯವರ ಪುತ್ರ, ಮೆಡಿಕಲ್ ರೆಪ್ರಸೆಂಟೇಟಿವ್ ಆಗಿದ್ದ ರವಿಚಂದ್ರ (36) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಮಧ್ಯಾಹ್ನ 1.15ರ ವೇಳೆಗೆ ಶಿರಾಯ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಅವಘಡ ಸಂಭವಿಸಿದೆ.
ಮೃತರು ತಾಯಿ ಸುಂದರಿ, ಪತ್ನಿ ಸಂಧ್ಯಾ, ಮಗಳು ಆರಾಧ್ಯಳನ್ನು ಅಗಲಿದ್ದಾರೆ. ಮೃತರ ಸಹೋದರ ಜನಾರ್ಧನ ಪೂಜಾರಿ ಪುತ್ತಿಗೆ ಗ್ರಾ.ಪಂ ಸದಸ್ಯರಾಗಿದ್ದಾರೆ.
