ಮಂಗಳೂರು ವಿವಿ ಪರೀಕ್ಷೆಯಲ್ಲಿ ಅಕ್ಷಯ ಕಾಲೇಜು ವಿದ್ಯಾರ್ಥಿಗಳ ಸಾಧನೆ

Share with

ಪುತ್ತೂರಿನಲ್ಲಿ ವಿನೂತನವಾದ ವೃತ್ತಿಪರ ಶಿಕ್ಷಣವನ್ನು ಪರಿಚಯಿಸಿ ಹಲವು ಶೈಕ್ಷಣಿಕ ಸಾಂಸ್ಕೃತಿಕ ಸಾಧನೆಯನ್ನು ಮಾಡುತ್ತಿರುವ ಅಕ್ಷಯ ಕಾಲೇಜು ಪ್ರತಿವರ್ಷದಂತೆ ಈ ವರ್ಷವೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ರ‍್ಯಾಂಕ್‌ಗಳನ್ನು ಗಳಿಸಿಕೊಂಡು ಸಾಧನೆ ಮರೆದಿದೆ.

ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2023-2024 ರ ಸಾಲಿನ ಪದವಿ ಪರೀಕ್ಷೆಗಳಲ್ಲಿ ಅಕ್ಷಯ ಕಾಲೇಜು ಪುತ್ತೂರಿಗೆ ಎರಡು ರ‍್ಯಾಂಕುಗಳು ಲಭ್ಯವಾಗಿವೆ.


ಬಿ.ಎಸ್ಸಿ ಇಂಟೀರಿಯರ್ ಡಿಸೈನ್ ವಿಭಾಗದ ಜೀವಿತ ಎಸ್ ಕೆ ಇವರು 4550ರಲ್ಲಿ 4144 (91.08%)ಅಂಕ ಪಡೆದು ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.

ಇವರು ಮಂಜುನಾಥ ಆಚಾರ್ಯ ಎಸ್.ಕೆ. ಹಾಗೂ ಚಂದ್ರಾವತಿ ದಂಪತಿಗಳ ಪುತ್ರಿ. ಇಂಟೀರಿಯರ್ ಡಿಸೈನ್ ವಿಭಾಗದ ಇನ್ನೊರ್ವ ವಿದ್ಯಾರ್ಥಿನಿ ರಿಯಾ ಪೊನ್ನಮ್ಮ ಡಿ.ಕೆ. ಇವರು 4550ರಲ್ಲಿ 4124 (90.64%)ಅಂಕ ಪಡೆದು ದ್ವಿತೀಯ ರ‍್ಯಾಂಕ್ ಗಳಿಸಿದ್ದಾರೆ.

ಇವರು ಕೇಶವಾನಂದ ಡಿ. ಎನ್. ಹಾಗೂ ಅನಿತಾ ಕೆ. ಪಿ. ದಂಪತಿಗಳ ಪುತ್ರಿ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ.


Share with

Leave a Reply

Your email address will not be published. Required fields are marked *