ಕಾಸರಗೋಡು: ಇಲ್ಲಿನ ಕಯ್ಯಾರು ಪೊನ್ನೆತ್ತೋಡು ಮಹಿಳಾ ಯಕ್ಷಕೂಟ(ರಿ.) ವತಿಯಿಂದ ಮಾಸಿಕ ಸರಣಿ ತಾಳಮದ್ದಳೆ ಆ.20ರಂದು ಸಂಜೆ 4ರಿಂದ ಶ್ರೀ ಭಗವತೀ ಕೃಪ ವೀರಾಂಜನೇಯ ವ್ಯಾಯಾಮ ಶಾಲಾ ಸಭಾಂಗಣದಲ್ಲಿ ಜರಗಲಿದೆ.
ಕವಿ ಪಾರ್ಥಿ ಸುಬ್ಬರವರಿಂದ ವಿರಚಿತ ಪ್ರಸಂಗ. ಮುಮ್ಮೇಳದಲ್ಲಿ ಅರ್ಥದಾರಿಗಳಾಗಿ ರೇವತಿ ಟೀಚರ್ ಕುಚ್ಚಿಕ್ಕಾಡು, ಮೋಹಿನಿ ಕೊಪ್ಪಳ, ಅರುಣಾವತಿ ಪೊನ್ನೆತೋಡು, ಯಶವಂತಿ ಮಂಡೆಕಾಪು, ಯಶೋದಾ ಕುಬಣುರು, ನಳಿನಾಕ್ಷಿ ಅಡ್ಕ ಇವರು ಭಾಗವಹಿಸಲಿರುವರು.