
ಬಂಟ್ವಾಳ : ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ) ಇದರ 2025ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಯಶವಂತ್ ಸಾಲಿಯಾನ್ ಪತ್ತುಕೊಡಂಗೆ, ಆಯ್ಕೆಯಾದರು. ಉಳಿದಂತೆ ಉಪಾಧ್ಯಕ್ಷರುಗಳಾಗಿ ಶೀನಪ್ಪ ಕಡೇಕೋಳಿಮಜಲು,
ಗುರುಪ್ರಸಾದ್ ಕಲ್ಲಾಜೆ, ಕಾರ್ಯದರ್ಶಿಯಾಗಿ ಸಂದೇಶ್ ಪೂಜಾರಿ ಕುಂಡಾಜೆ, ಕೋಶಾಧಿಕಾರಿ ಚಂದ್ರಹಾಸ ಕಡೆಕೋಳಿಮಜಲು, ಪ್ರದಾನ ಸಂಚಾಲಕರಾಗಿ ದಿನೇಶ್ ಪೂಜಾರಿ ಸುರ್ಲಾಜೆ, ಗೌರವಧ್ಯಕ್ಷರಾಗಿ ಮೋಹನ್ ಕುಮಾರ್ ಕಲ್ಲಾಜೆ, ಸಂಘಟನಾ ಕಾರ್ಯದರ್ಶಿ ಯಾಗಿ ನವೀನ್ ಕಡೇಕೋಳಿಮಜಲು, ಸಾಮಾಜಿಕ ಜಾಲತಾಣ ಪ್ರಮುಖರಾಗಿ ಪ್ರಿಯರಂಜನ್ ಪಡ್ಡಾಯಿಬೆಟ್ಟು, ಸುರೇಂದ್ರ ಕುಂಡಾಜೆ, ಕ್ರೀಡಾ ಕಾರ್ಯದರ್ಶಿಗಳಾಗಿ : ಅವಿನ್ ಮಮ್ಮಾಲಿಬೆಟ್ಟು, ಸೃಜನ್ ಪಟ್ಲ, ಮಹಿಳಾ ಘಟಕದ ಪ್ರಮುಖರಾಗಿ ಲತಾ ಕೊರತಿ ಗುರಿ, ಭುವನೇಶ್ವರಿ ಮುನ್ನಿಮಾರು, ವಿದ್ಯಾರ್ಥಿ ಘಟಕದ ಪ್ರಮುಖರಾಗಿ
ನವ್ಯ ಪೂವಳ, ಶಿವಾನಿ ಕಲ್ಲಾಜೆ, ಬೂತ್ ಸಂಚಾಲಕರುಗಳಾಗಿ ಒಂದನೇ ಬೂತ್ ಗೆ ಹರೀಶ್ ಕಜೆ, ಎರಡನೇ ಬೂತ್ ಗೆ ಸಂತೋಷ್ ನೆತ್ತರ, ಮೂರನೇ ಬೂತ್ ಗೆ ಚಂದ್ರಶೇಖರ ಪೂಜಾರಿ ದೊಡ್ಡಾಜೆ, ನಾಲ್ಕನೇ ಬೂತ್ ಗೆ ವಿನಯ ರಾಜಾಲು ರವರನ್ನು ಆಯ್ಕೆ ಮಾಡಲಾಯಿತು.