
ಉಪ್ಪಳ: ಧಾರ್ಮಿಕ ಮುಂದಾಳು ಹಾಗೂ ನಿವೃತ್ತ ಅಧ್ಯಾಪಕರು, ಬಿಜೆಪಿ ಸಕ್ರೀಯ ಕಾರ್ಯಕರ್ತರಾದ ಕಯ್ಯಾರು ಬಳಿಯ ಶಾಂತಿಯೋಡು ನಿವಾಸಿ ಬಾಲಕೃಷ್ಣ ನಾಯ್ಕ್ [93] ನಿನ್ನೆ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಇವರು ಅಟ್ಟೆಗೋಳಿ ಎ.ಎಲ್.ಪಿ ಶಾಲೆಯಲ್ಲಿ 30ಕ್ಕಿಂತ ಅಧಿಕ ವರ್ಷ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದರು. ಅಲ್ಲದೆ ಕಯ್ಯಾರು ಶ್ರೀ ಮಹಮ್ಮಾಯಿ ದೇವಸ್ಥಾದ ಸೇವಾ ಸಂಘದ ಅಧ್ಯಕ್ಷರು, ಶ್ರೀ ಜನಾರ್ಧನ ದೇವಸ್ಥಾನದ ಟ್ರಸ್ಟಿ, ಪೆರ್ಲ ಶಾರದಾ ಮರಾಠಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರೂ, ಸಕ್ರೀಯ ಕಾರ್ಯಕರ್ತರು ಹಾಗೂ ಕೇರಳ ಮರಾಠಿ ಸಂರಕ್ಷಣ ಸಮಿತಿಯ ಸ್ಥಾಪಕ ಅಧ್ಯಕ್ಷರೂ, ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂಘದ ಮಹಾ ಪೋಷಕರು, ಅಟ್ಟೆಗೋಳಿ ಎ.ವೈ.ಸಿ ಲೈಬ್ರೆರಿ ಮಾಜಿ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಮರಾಠಿ ಸಮುದಾಯದ ಒಳಿತಿಗಾಗಿ ಜನ ಸಂಘಟನೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ , ಹೋರಾಟದ ಹಾದಿಯನ್ನು ಹಿಡಿದು,ಹೊಸ ನಾಯಕನನ್ನು ಹುಟ್ಟು ಹಾಕಿದ ವ್ಯಕ್ತಿಯಾಗಿದ್ದರು. ಮೃತರು ಪತ್ನಿ ಪ್ರಭಾವತಿ, ಮಕ್ಕಳಾದ ರವಿ ಪ್ರಸಾದ್, ನಯನ ಕುಮಾರ್, ಸಂಪನ್ನ ಕುಮಾರ್, ಸತೀಶ್ ಕುಮಾರ್, ರಾಜೇಂದ್ರ ಪ್ರಸಾದ್, ಜಯಶ್ರೀ, ಸೊಸೆಯಂದಿರಾದ ರಾಜೇಶ್ವರಿ, ನೀತಾ, ಸವಿತಾ,ನಿರ್ಮಲ, ಕಲಾವತಿ, ಅಳಿಯ ಧನ್‌ಪಾಲ್, ಸಹೋದರರಾದ ವಿಠಲ ನಾಯ್ಕ್, ವೆಂಕಪ್ಪ ನಾಯ್ಕ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.