CM DK ಶಿವಕುಮಾರ್ ಇಂದು ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಿಂದ ಕೃಷಿ VV ವಸತಿ ಗೃಹದವರೆಗೆ 2.3KM ಉದ್ದದ 6 ಪಥದ ಮೊದಲ ಸುರಂಗ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಏರ್‌ಪೋರ್ಟ್ ರಸ್ತೆಯ ಸಂಚಾರ ದಟ್ಟಣೆ ನಿವಾರಣೆ ಇದರ ಉದ್ದೇಶವಾಗಿದೆ.

ಯೋಜನೆಗೆ 60 ಎಕರೆ ಭೂಮಿ ಅಗತ್ಯವಿದ್ದು, ₹1,119 ಕೋಟಿ ಅಂದಾಜು ವೆಚ್ಚ ಆಗಿದೆ. ಕಾಮಗಾರಿ 18ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೆಬ್ಬಾಳ, MEG ಭಾಗದ ವಾಹನ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.




