ಸಂತಸದಾಯಕ ಕಲಿಕೆಯಿಂದ ಮಗುವಿನಲ್ಲಿ ಶಿಕ್ಷಣದ ಮೇಲೆ ಒಲವು ಮೂಡುತ್ತದೆ.. ಪದ್ಮನಾಭ ಕೊಟ್ಟಾರಿ

Share with

ಬಂಟ್ವಾಳ : ಶಿಕ್ಷಣವು ಮಗುವಿನಲ್ಲಿ ಆಸಕ್ತಿಯನ್ನು ಬೆಳೆಸುವಂತೆ ಇದ್ದಾಗ ಮಗು ಕಲಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತದೆ. ಸಂತಸದಾಯಕ ಕಲಿಕೆಯಿಂದ ಮಗುವಿನಲ್ಲಿ ಶಿಕ್ಷಣದ ಮೇಲೆ ಒಲವು ಮೂಡುತ್ತದೆ. ಕಲಿಕೆಯು ಮಗುವಿನಲ್ಲಿ ಹಬ್ಬದ ಭಾವನೆಯನ್ನು ಮೂಡಿಸುವಂತಿರಬೇಕು ನಲಿಯುತ್ತಾ ಕಲಿತಾಗ ಶಿಕ್ಷಣವು ಆಸಕ್ತಿಯನ್ನು ಉಂಟುಮಾಡುತ್ತದೆ. ಎಂದು
ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಹೇಳಿದರು.

ಅವರು ಮಂಗಳವಾರ ಬಂಟ್ವಾಳ ತಾಲೂಕಿನ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಂಡಾಲ ಇಲ್ಲಿ ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆ ಧಕ್ಷಿಣ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ  ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಬಂಟ್ವಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಂಡಾಲ ವತಿಯಿಂದ ನಡೆದ  ಮೂಲಾಭೂತ ಸಾಕ್ಷಾರತ ಮತ್ತು ಸಂಖ್ಯಾ ಜ್ಞಾನದ  ಕಲಿಕಾ ಹಬ್ಬ- 2025  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿಶೇಷ ಸಮಾಜ ಸೇವೆ ಸಲ್ಲಿಸುತ್ತಿರುವ ಅಮ್ಮ ಬೇಕರಿ ಬೋಳಂಗಡಿ ಮಾಲಕ ಶ್ರೀ ಜನಾರ್ದನ ದಂಪತಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.

ಬಂಟ್ವಾಳ ನಗರ ಕ್ಲಸರಿನ ಸುಮಾರು ಸುಮಾರು 110 ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಬಂಟ್ವಾಳ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಮತಿ ನಾಗರತ್ನ, ಕ್ಲಸ್ಟರ್   ಸಂಪನ್ಮೂಲ ವ್ಯಕ್ತಿ ಸುಧಾಕರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜನಾರ್ಧನ ಕುಲಾಲ್, ಹಿಂದುಳಿದ ವರ್ಗ ಬಾಲಕರ ವಸತಿ ನಿಲಯ ಪಾಣೆಮಂಗಳೂರಿನ ವಿಶ್ವನಾಥ್, ಬಿ ಐ ಈ ಆರ್ ಟಿ ರವೀಂದ್ರ,ಶಾಲಾ ವಿವೇಕಾನಂದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

ಮಕ್ಕಳು ಪ್ರಾರ್ಥಿಸಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ರೇಖಾ ಸಿ ಎಚ್ ಸ್ವಾಗತಿಸಿ, ಸಮೂಹ ಸಂಪನ್ಮೂಲ ವ್ಯಕ್ತಿ ನಾಗರತ್ನ ಕಾರ್ಯಕ್ರಮದ ಪ್ರಾಸವಿಕ ಮಾತನಾಡಿದರು., ಶಿಕ್ಷಕಿ ಲಾವಣ್ಯ ವಂದಿಸಿದರು, ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಭವ್ಯ ಕಿಶೋರಿ ವಸಂತ್ ಅಂಚನ್ ಸಹಕರಿಸಿದರು.


Share with

Leave a Reply

Your email address will not be published. Required fields are marked *