ಮಂಗಳೂರು: ಇಲ್ಲಿನ ಬೊಂಧೆಲ್ನ ಕೊಲಸೋ ಇನ್ಸ್ಟಿಟ್ಯೂಷನ್ ಬಿಲ್ಡಿಂಗ್ ನಲ್ಲಿ “ಬ್ಲೂಫಿಟ್ ಜಿಮ್” ಮೇ.16ರಂದು ಉದ್ಘಾಟನೆಗೊಂಡಿತು. ಡೈಜಿವರ್ಲ್ಡ್ನ ವಾಲ್ಟರ್ ನಂದಳಿಕೆ ಸಂಸ್ಥೆಯನ್ನು ಉದ್ಘಾಟಿಸಿದರು.

ಪ್ರೀಮಿಯಂ ವರ್ಕೌಟ್ ಏರಿಯಾ, ರನ್ನಿಂಗ್ ಟ್ರ್ಯಾಕ್ ಸೇರಿದಂತೆ ಆಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ಒಳಗೊಂಡ ಜಿಮ್ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಿದ್ದು, ಫಿಟ್ನೆಸ್ ಪ್ರಿಯರ ಗಮನ ಸೆಳೆಯುತ್ತಿದೆ.
ಈ ಕುರಿತು ಮಾತನಾಡಿದ ಸಂಸ್ಥೆಯ ಮಾಲಕರಾದ ಮೊಹಮ್ಮದ್ ಶಬೀರ್, ಗ್ರಾಹಕರಿಗೆ ಸುಸಜ್ಜಿತ ವ್ಯವಸ್ಥೆಯೊಂದಿಗೆ ಉತ್ತಮ ಸೇವೆ ನೀಡುವ ಉದ್ದೇಶ ಹೊಂದಿದ್ದೇವೆ. ಇದೇ ಸಂದರ್ಭದಲ್ಲಿ ವಿಶೇಷ ರಿಯಾಯಿತಿ ಹಾಗೂ ಆಕರ್ಷಕ ಆಫರ್ಗಳನ್ನು ಕೂಡ ಪರಿಚಯಿಸಲಾಗಿದೆ ಎಂದು ತಿಳಿಸಿದ್ದಾರೆ.




