ವೀಕ್ಷಕವಾಣಿ: ಇಲ್ಲೊಂದು ಮನೆಯಲ್ಲಿ ಮೂವರು ಮಕ್ಕಳು ಊಟಕ್ಕೆಂದು ನೆಲದ ಮೇಲೆ ಕೂತು ಅನ್ನವನ್ನು “ಓಂ ಸಹನಾವವತು ಸಹನೌಭುನಕ್ತು..” ಎಂದು ಶ್ಲೋಕವನ್ನು ಹೇಳಲು ಆರಂಭಿಸುತ್ತಾರೆ. ಅರೆ.. ಇದ್ರಲ್ಲೇನಪ್ಪ ಇದೆ ವಿಶೇಷ ಅಂತೀರಾ..? ಮೂವರು ಮಕ್ಕಳ ಜೊತೆಗೆ ನಾಯಿ ಮರಿಯೂ ಕೂಡಾ ಊಟ ಮಾಡಲು ಪಂಕ್ತಿಯಲ್ಲಿ ಕೂತಿದೆ.
ಮಕ್ಕಳ ಜೊತೆಗೆ ನಾಯಿ ಮರಿಯೂ ಕೂಡಾ ಪ್ರಾರ್ಥನೆಗೆ ತಲೆದೂಗಿ ಮುಂದಿಟ್ಟುಕ್ಕೊಂಡು ತನ್ನ ತಟ್ಟೆಯನ್ನು ಆಸೆಕಣ್ಣುಗಳಿಂದ ನೋಡುತ್ತ ನಾಯಿ ಮುಖವನ್ನು ನೆಲಕ್ಕೆ ಹಚ್ಚಿ ವಿಶ್ರಾಮ ಭಂಗಿಯಲ್ಲಿದೆ. ಕೊನೆಯ “ಶಾಂತಿಃ” ಕಿವಿಗೆ ಬಿದ್ದಕೂಡಲೇ ಚುರುಕಾದ ಅದು ಎದ್ದು ನಿಲ್ಲುತ್ತದೆ. “ಹಾಂ… ತಿನ್ನು..” ಎಂದ ಕೂಡಲೇ ತನ್ನ ತಟ್ಟೆಗೆ ಬಾಯಿ ಹಾಕುತ್ತದೆ. ಈ ವೀಡಿಯೋ ವೈರಲ್ ಆಗಿದ್ದು ನೆಟ್ಟಿಗರು ನಾಯಿಯ ಚುರುಕುತನಕ್ಕೆ ಭಾರೀ ಪ್ರಶಸಂಸೆ ವ್ಯಕ್ತಪಡಿಸಿದ್ದಾರೆ.