ಮಂಜೇಶ್ವರ: ಮೀಂಜ-ಮಂಗಲ್ಪಾಡಿ ಪಬ್ಲಿಕ್ ವೆಲ್ಪೇರ್ ಸಹಕಾರಿ ಸಂಘ, ನಿಯಮಿತ ಇದರ ನೂತನ ಕಚೇರಿ ಚಿಗುರುಪಾದೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.
ಲೀಲಾವತಿ.ಪಿ ಶೆಟ್ಟಿ ಕುಳೂರು ಕನ್ಯಾನ ದೀಪ ಪ್ರಜ್ವಲನೆಗೊಳಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಮಾರಂಭದ ಅಧ್ಯಕ್ಷೆ ವಹಿಸಿದರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿ ಮಾತನಾಡಿದರು. ಕೌಂಟರ್‌ನ್ನು ಕಾಸರಗೋಡು ಸರ್ಕಲ್ ಕೋಪರೇಟಿವ್ ಯೂನಿಯನ್ ಚಯರ್‌ಮೆನ್ ಕೆ.ಆರ್ ಜಯಾನಂದ, ಭದ್ರತಾ ಕೊಠಡಿಯನ್ನು ಮಂಜೇಶ್ವರ ಕೋಪರೇಟಿವ್ ಸೊಸೈಟಿಯ ಅಸಿಸ್ಟೆಂಟ್ ರಿಜಿಸ್ಟಾçರ್ ನಾಗೇಶ.ಕೆ, ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶಮೀನ ಟೀಚರ್ ಸೇರು ಸ್ವೀಕರಣೆ, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಠೇವಣೆ ಸ್ವೀಕರಣೆ, ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ ಸಾಲ ವಿತರಣೆಯ ಉದ್ಘಾಟನೆಯನ್ನು ನೆರವೇರಿಸಿದರು.
ಮಾಜಿ ಶಾಸಕ ಕೆ.ವಿ ಕುಂಞಂರಾಮನ್ ಮುಖ್ಯ ಅತಿಥಿಯಾಗಿದ್ದರು. ಬ್ಲೋಕ್ ಪಂಚಾಯತ್ ಸದಸ್ಯ ಕೆ.ವಿ ರಾಧಾಕೃಷ್ಣ ಭಟ್, ಮೀಂಜ ಪಂಚಾಯತ್ ವಿದ್ಯಾಭ್ಯಾಸ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಸರಸ್ವತಿ, ಕಾಸರಗೋಡು ಕೋಪರೇಟಿವ್ ಬ್ಯಾಂಕ್ ಲೆಕ್ಕಪರಿಶೋಧಕ ವಿಭಾಗದ ಅಸಿಸ್ಟೆಂಟ್ ನಿರ್ಧೇಕಿ ಲತಾ.ಟಿ.ಎಂ, ಕ್ಯಾಂಮ್ಕೋ ನಿರ್ಧೇಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಡಿ.ಕಮಲಾಕ್ಷ, ಲೀಗ್ ನೇತಾರ ಎ.ಕೆ ಆರೀಫ್, ಬಿಜೆಪಿ ನೇತಾರ ಆದರ್ಶ್.ಬಿ.ಎಂ, ಮಂಜೇಶ್ವರ ವ್ಯಾಪಾರಿ ಸಮಿತಿ ಅಧ್ಯಕ್ಷ ಬಶೀರ್ ಕನಿಲ, ವ್ಯಾಪಾರಿ ಚೆನ್ನಪ್ಪ ಪೂಜಾರಿ, ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಘುನಾಥ ಶೆಟ್ಟಿ ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೊಹಮ್ಮದ್ ಹನೀಫ್, ಕೊಡ್ಲಮೊಗರು-ಪಾತೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೋಹನ.ಬಿ, ಮಂಗಲ್ಪಾಡಿ-ಪೈವಳಿಕೆ ಹರ್ಬನ್ ಕೋಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಡಿ.ಪ್ರಭಾಕರ ಚೌಟ, ರವೀಂದ್ರ ಮಡ್ವ, ಅಬ್ದುಲ್ ಕಾದರ್ ಶಖಾಫಿ ಚಿನಾಲ, ವರ್ಕಾಡಿ ಪಂಚಾಯತ್ ಅಧ್ಯಕ್ಷೆಭಾರತಿ ಸುಳ್ಯಮೆ, ಎಸ್.ಡಿ.ಪಿ.ಐ ನೇತಾರ ಅಶ್ರಫ್ ಬಡಾಜೆ ಮೊದಲಾದವರು ಶುಭಾಂಶನೆ ನೀಡಿದರು.
ಪದ್ಮಜ, ನಿಶಿತಾ, ಶರಣ್ಯ ಪ್ರಾರ್ಥನೆ ಹಾಡಿದರು. ಸಹಕಾರಿ ಸಂಘದ ನಿರ್ಧೇಶಕ ರಾಮಚಂದ್ರ.ಟಿ ಪ್ರಾಸ್ತಾವಿಕ ಮಾತನಾಡಿದರು. ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಸಹಕಾರಿ ಸಂಘದ ಕಾರ್ಯದರ್ಶಿ ಉದಯ.ಸಿ.ಎಚ್ ದನ್ಯವಾದ ಹಾಗೂ ರವೀಂದ್ರ ಭಂಡಾರಿ ಚಿನಾಲ ಕಾರ್ಯಕ್ರಮ ನಿರೂಪಿಸಿದರು.