ಕೊರಗಜ್ಜ ಸರ್ಕಲ್ ವಿವಾದ; ಖಾದರ್ ಗೆ ಮುತ್ತಿಗೆ ಹಾಕಿದ 11 ಜನರ ವಿರುದ್ಧ ಪ್ರಕರಣ ದಾಖಲು

Share with

ಮಂಗಳೂರು: ಸ್ಪೀಕರ್ ಯು.ಟಿ.ಖಾದರ್ ಗೆ ಘೇರಾವ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಭದ್ರತಾ ಸಿಬ್ಬಂದಿ ದೂರಿನ ಹಿನ್ನಲೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಗಳೂರು ಹೊರವಲಯದ ಕುತ್ತಾರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ವೃತ್ತಕ್ಕೆ ಕೊರಗಜ್ಜನ ಹೆಸರು ಇಡಬಾರದೆಂದು ಒತ್ತಾಯಿಸಿ ಗುಂಪೊಂದು ಸ್ಪೀಕರ್ ಗೆ ಉಳ್ಳಾಲದಲ್ಲಿ ಘೇರಾವ್ ಹಾಕಿತ್ತು. ಘಟನೆ ಬಗ್ಗೆ ಪೊಲೀಸ್ ದೂರು ನೀಡಿದ್ದ ಸ್ಪೀಕರ್ ಭದ್ರತಾ ಸಿಬ್ಬಂದಿ ಮೊಹಮ್ಮದ್ ಯಾಸಿನ್ ಇನಾಮದಾರ ಉಳ್ಳಾಲ ಪೋಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮದನಿನಗರ ನಿವಾಸಿ ಜುನೈದ್ ಸೇರಿದಂತೆ 10 ಜನರ ಪ್ರಕರಣ ದಾಕಲಾಗಿದ್ದು,ಪೋಲೀಸರು ತನಿಖೆ ಆರಂಭಿಸಿದ್ದಾರೆ.


Share with

Leave a Reply

Your email address will not be published. Required fields are marked *