ಕರಿ ಕೋಟು ಧರಿಸಿ ಕೋರ್ಟ್ ಗೆ ಬಂದ ಮಮತಾ ಬ್ಯಾನರ್ಜಿ

Share with

ಕೋಲ್ಕತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ವಕೀಲರ ಕರಿ ಕೋಟು ಧರಿಸಿ ಮತ್ತೆ ಕೋರ್ಟ್‌ ಗೆ ಆಗಮಿಸಿ ಗಮನ ಸೆಳೆದಿದ್ದಾರೆ.

ಚುನಾವಣೋತ್ತರ ಹಿಂಸಾಚಾರದ ಪಿಐಎಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಎಚ್ ಸಿ ಸುಜಯ್ ಪಾಲ್ ಅವರ ಮುಂದೆ ಹಾಜರಾಗಲು ವಕೀಲೆಯಾಗಿ ಕಲ್ಕತ್ತಾ ಹೈಕೋರ್ಟ್‌ಗೆ ಆಗಮಿಸಿದರು. ಪ್ರಕರಣದ ವಿಚಾರಣೆಯ ಹಲವಾರು ಅಂಶಗಳ ಕುರಿತು ಮಮತಾ ಬ್ಯಾನರ್ಜಿ ಪ್ರಶ್ನೆಗಳನ್ನು ಎತ್ತುವ ನಿರೀಕ್ಷೆಯಿದೆ.

ಟಿಎಂಸಿ ನಾಯಕ-ವಕೀಲ ಕಲ್ಯಾಣ್ ಬಂಡೋಪಾಧ್ಯಾಯ ಅವರ ಪುತ್ರ ಶಿರ್ಷಣ್ಯ ಬಂಡೋಪಾಧ್ಯಾಯ ಅವರು ಈ ಅರ್ಜಿ ಸಲ್ಲಿಸಿದ್ದಾರೆ.


Share with

Leave a Reply

Your email address will not be published. Required fields are marked *