ಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಅವರ ಚುನಾವಣಾ ಪ್ರಚಾರಾರ್ಥ ಸ್ಥಾಪಿಸಿದ್ದ ಪ್ಲೆಕ್ಸ್ ಬೋರ್ಡ್‌ನ್ನು ಕಿಡಿಗೇಡಿಗಳು ನಾಶಗೊಳಿಸಿದ್ದಾರೆ.
ಉಪ್ಪಳ ಭಗವತೀ ಗೇಟ್ ಬಳಿ ಸ್ಥಾಪಿಸಿದ್ದ ಪ್ಲೆಕ್ಸ್ ಬೋರ್ಡ್‌ನ್ನು ನಿನ್ನೆ ರಾತ್ರಿ ನಾಶಗೊಳಿಸಲಾಗಿದೆ. ಎನ್‌ಡಿಎ ಮಂಜೇಶ್ವರ ಮಂಡಲ ಚುನಾವಣಾ ಕಚೇರಿ ಉಪ್ಪಳ ಭಗವತೀ ಗೇಟ್ ಬಳಿ ಇಂದು(ಮಾ.8) ಉದ್ಘಾಟಿಸಲು ನಿರ್ಧರಿಸಲಾಗಿದೆ. ಈ ಕಚೇರಿ ಸಮೀಪ ಅಭ್ಯರ್ಥಿಯ ಬೃಹತ್ ಪ್ಲೆಕ್ಸ್ ಬೋರ್ಡ್ ಸ್ಥಾಪಿಸಲಾಗಿತ್ತು. ಅದನ್ನು ಕಿಡಿಗೇಡಿಗಳು ಹರಿದು ನಾಶಗೊಳಿಸಿದ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಕಂಡು ಬಂದಿದೆ. ಕಿಡಿಗೇಡಿಗಳ ಈ ಕೃತ್ಯದ ಬಗ್ಗೆ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.