ವಿಚಾರಣಾಧೀನ ಕೈದಿಗಳಿಗೆ ರಾಜಾತಿಥ್ಯ: ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

Share with

ಬೆಂಗಳೂರು, ಅಕ್ಟೋಬರ್ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ ಟೀಕೆಗೆ ಗ್ರಾಸವಾಗಿತ್ತು. ಕೈದಿಗಳಿಗೆ ಜೈಲಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದವು. ಈ ವಿಷಯ ಮಾಸುವ ಮುನ್ನವೇ ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ದುಡ್ಡು ಕೊಟ್ಟರೆ ಜೈಲಿನಲ್ಲಿ ಏನು ಬೇಕಾದರೂ ಸಿಗುತ್ತೆ ಎಂಬ ವಿಚಾರಕ್ಕೆ ಮತ್ತಷ್ಟು ಸಾಕ್ಷಿಗಳು ಸಿಕ್ಕಿದ್ದು, ಫೈವ್ ಸ್ಟಾರ್ ಹೋಟೆಲ್ ರೀತಿ ವಿಚಾರಣಾಧೀನ ಕೈದಿಗಳಿಗೆ ರಾಜಾತಿಥ್ಯದ ನೀಡಿರುವ ಫೋಟೋಗಳು ವೈರಲ್ ಆಗಿವೆ.

ಗುಬ್ಬಚ್ಚಿ ಸೀನಾ ಮತ್ತು ಆತನ ಸಹಚರರಿಗೆ ಜೈಲಲ್ಲಿ ಹೈಫೈ ವ್ಯವಸ್ಥೆ ನೀಡಲಾಗಿದೆ. ವಿಚಾರಣಾಧೀನ ಕೈದಿಗಳಿಗೆ LED ಟಿವಿ ಸೌಲಭ್ಯದ ಜೊತೆಗೆ ಅಡುಗೆ ಮಾಡಿಕೊಳ್ಳಲು ಒಲೆ, ಪಾತ್ರೆ, ಅಡುಗೆ ಪದಾರ್ಥಗಳೂ ಸಿಗುತ್ತಿವೆ. ಮೊಟ್ಟೆ , ಚಿಕನ್ ಐಟಂಗಳು, ಮೊಬೈಲ್, ಚಾರ್ಜರ್, ಪಾರ್ಟಿ ಮಾಡಲು ಸೌಂಡ್ ಬಾಕ್ಸ್ ಸೇರಿ ಐಶಾರಾಮಿ ವ್ಯವಸ್ಥೆ ಇದೆ. ಹಣದಾಸೆಗೆ ಕೈದಿಗಳ ಜೊತೆ ಜೈಲಾಧಿಕಾರಿಗಳು ಮತ್ತು ಸಿಬ್ಬಂದಿಗಳು ಶಾಮೀಲಾಗಿದ್ದು, ಜೈಲಲ್ಲಿ ಕೈದಿಗಳು ಬಿಂದಾಸ್ ಆಗಿ ದಿನ ಕಳೆಯುತ್ತಿದ್ದಾರೆ. ಏಸು ಕ್ರಿಸ್ತನ ಚಿತ್ರದ ಮುಂದೆ ನಿಂತು ಗುಬ್ಬಚ್ಚಿ ಸೀನಾ ಮತ್ತು ಗ್ಯಾಂಗ್ ಗ್ರೂಪ್ ಫೋಟೋಶೂಟ್ ನಡೆಸಿದ್ದು, ಪಾರಿವಾಳ ಹಿಡಿದು ಕ್ಯಾಮರಾಗೆ ವಿಚಾರಣಾಧೀನ ಕೈದಿಗಳು ಪೋಸ್ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗುಬ್ಬಚ್ಚಿ ಸೀನಾನ ಸಹಚರ, ಕೊಲೆ ಆರೋಪಿ ಅರವಿಂದ್ ಹಂಚಿಕೊಂಡಿದ್ದ ಈ ಫೋಟೋಗಳು ನೋಡುಗರಿಗೆ ಶಾಕ್ ಉಂಟುಮಾಡಿದೆ. ಜೈಲಲ್ಲಿ ಕೈದಿಗಳು ಹೀಗೆಲ್ಲ ಇರಬಹುದಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.


Share with

Leave a Reply

Your email address will not be published. Required fields are marked *