
ಬಂಟ್ವಾಳ : ಚೆನ್ನೈತೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯದ ನೀರಿನ ವ್ಯವಸ್ಥೆಗೆ ಸಮಸ್ಯೆಯಾಗಿದ್ದು ಶೌಚಾಲಯದ ಪೈಪ್ ಲೈನ್ ಕೆಲಸವನ್ನು ಮಾಡಲು ಶಾಲಾ ಮುಖ್ಯ ಶಿಕ್ಷಕರು ಶೌರ್ಯ ಘಟಕಕ್ಕೆ ಮನವಿ ಮಾಡಿದಾಗ ವಾಮದಪದವು ಶೌರ್ಯ ವಿಪತ್ತು ನಿರ್ವಹಣಾ ಘಟಕ ತುರ್ತು ಸ್ಪಂದಿಸಿ ಶ್ರಮಮಾಧಾನ ಸೇವೆ ಮೂಲಕ ದುರಸ್ತಿ ಮಾಡಿಕೊಟ್ಟರು. ಹಾಗೂ ಅಂಗನವಾಡಿ ಮತ್ತು ಶಾಲಾ ಸುತ್ತಮುತ್ತ ಸ್ವಚ್ಛತಾ ಕಾರ್ಯ ಮಾಡಿದರು.
ಈ ಸೇವಾ ಕಾರ್ಯದಲ್ಲಿ ಇರ್ವತ್ತುರ್ ಸೇವಾ ಪ್ರತಿನಿಧಿ ಭಾರತೀ, ಕೊಡಂಬೆಟ್ಟು ಸೇವಾ ಪ್ರತಿನಿಧಿ ಮೋಹನ್ ದಾಸ್ ಗಟ್ಟಿ, ಶೌರ್ಯ ಘಟಕ ಸದಸ್ಯರುಗಳಾದ
ಪ್ರಕಾಶ್, ಮಾಧವ, ಚೇತನ್,ರಾಜೇಶ್, ಯಶೋದರ,ತಾರಾನಾಥ್, ಗಿರೀಶ್, ದನವತಿ,ಸುರೇಶ, ಭಾಗವಹಿಸಿದ್ದರು.