ಸಿಲಿಕಾನ್ ಸಿಟಿ ಕಿರುಚಿತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ ಅಮೈ ಅಡ್ಯನಡ್ಕ ಅಭಿನಯ

Share with



ಉಪ್ಪಳ :ಅದ್ಭುತವಾದ ಸಂದೇಶಗಳನ್ನೂಳಗೊಂಡ ಕನ್ನಡ ಕಿರುಚಿತ್ರ “ಸಿಲಿಕಾನ್ ಸಿಟಿ”.
ಇದರಲ್ಲಿ ಪ್ರಮುಖವಾದ ಪಾತ್ರವೊಂದಕ್ಕೆ ಆಧುನಿಕ ಭಗೀರಥ ಎಂದೇ ಪ್ರಸಿದ್ಧಿ ಪಡೆದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ  ಮಹಾಲಿಂಗ ನಾಯ್ಕ ಅಮೈ ಅಡ್ಯನಡ್ಕ ಇವರು ಅಭಿನಯಿಸಿರುವುದು ಚಿತ್ರದ ಹಲವಾರು ವೈಶಿಷ್ಠ್ಯಗಳಲ್ಲಿ ಒಂದು.
ಅತ್ಯುತ್ತಮ ತಾಂತ್ರಿಕತೆಯಿಂದ ಮೂಡಿಬಂದ ಈ ಚಿತ್ರದ ಕಥೆ, ಸಂಭಾಷಣೆ, ನಿರ್ದೇಶನ  ತುಕಾರಾಮ ಬಾಯಾರು.ನಿರ್ಮಾಪಕರು ಶರತ್ ಚಂದ್ರ ಬಾಯಾರು.
ಬೀಟಾ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ತಯಾರಾದ ಈ ಕಿರುಚಿತ್ರದಲ್ಲಿ ಹಲವು ಕ್ಷೇತ್ರದ ಪ್ರಮುಖರು ಹಾಗೂ ಅತ್ಯುತ್ತಮ ಕಲಾವಿದರು ಅಭಿನಯಿಸಿರುವುದು ಈ ಚಿತ್ರದ ವಿಶೇಷ. ಚಿತ್ರ ಪ್ರೇಮಿಗಳನ್ನು ರಂಜಿಸಲು ಚಿತ್ರತಂಡ ಕಾರ್ಯಮಗ್ನವಾಗಿದೆ. ಈ ಚಿತ್ರಕ್ಕೆ ಗುರು ಬಾಯಾರು ಸಂಗೀತ ನೀಡಿದ್ದಾರೆ.


Share with

Leave a Reply

Your email address will not be published. Required fields are marked *