ಟ್ರೇಡಿಂಗ್ ನಲ್ಲಿ ಹೂಡಿಕೆಯಿಂದ ಲಾಭದ ಆಮಿಷ..; ವ್ಯಕ್ತಿಗೆ 5.95 ಕೋಟಿ ವಂಚನೆ..!

Share with

ಬೆಂಗಳೂರು: ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಪಡೆಯುವಂತೆ ಆಮಿಷವೊಡ್ಡಿದ ಸೈಬರ್ ವಂಚಕರು, ವ್ಯಕ್ತಿಯೊಬ್ಬನಿಂದ ಬರೋಬ್ಬರಿ 5.95 ಕೋಟಿ ರೂ. ದೋಚಿದ್ದಾರೆ. ಈ ಸಂಬಂಧ ಬಾಗಲಗುಂಟೆಯ ನಿವಾಸಿ ಮಲ್ಲಿಕಾರ್ಜುನ್ ನೀಡಿದ ದೂರಿನ ಮೇರೆಗೆ ಸೈಬರ್‌ಂ ಠಾಣೆ ಪೊಲೀಸರು ಶಿಲ್ಪಾ ಶಿವಕುಮಾ‌ರ್ ಹಾಗೂ ಶಿವಕುಮಾ‌ರ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ನೇಹಿತರಿಂದ ಆನ್‌ಲೈನ್ ಟ್ರೇಡಿಂಗ್ ಗೆ ಪ್ರೇರೇಪಿತನಾದ ಸಂತ್ರಸ್ತ ಮಲ್ಲಿಕಾರ್ಜುನ್, ಗೂಗಲ್ ಮತ್ತು ಫೇಸ್‌ಬುಕ್‌ನಲ್ಲಿ ಟ್ರೇಡಿಂಗ್ ಸಲಹಾ ತಜ್ಞರ ಬಗ್ಗೆ ಹುಡುಕಾಟ ನಡೆಸಿದ್ದ. ಈ ವೇಳೆ ಆರೋಪಿಗಳನ್ನು ಮಲ್ಲಿಕಾರ್ಜುನ್ ಸಂಪರ್ಕಿಸಿದ್ದಾರೆ. ನಂತರ ತಾವುಗಳು ಅನುಭವಿ ಟ್ರೇಡಿಂಗ್ ಸಲಹೆಗಾರರು ಎಂದು ನಂಬಿಸಿದ್ದಾರೆ. ಜತೆಗೆ ನಮ್ಮಸಲಹೆಯಿಂದ ಅನೇಕರು ಕೋಟಿಗಟ್ಟಲೆ ಸಂಪಾದಿಸಿದ್ದಾರೆ ಎಂದು ಕೆಲವು ದಾಖಲೆಗಳನ್ನು ತೋರಿಸಿದ್ದಾರೆ. ಅದಕ್ಕೆ ಮರುಳಾದ ಮಲ್ಲಿಕಾರ್ಜುನ್, ವಂಚಕರು ಕಳುಹಿಸಿದ್ದ ನಕಲಿ ಲಿಂಕ್ ಮೂಲಕ ಟ್ರೇಡಿಂಗ್ ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಆರಂಭ ದಲ್ಲಿ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಸರಿಯಾಗಿ ಕಾರ್ಯನಿರ್ವಹಿಸುವ ಹಾಗೆ ಬಿಂಬಿಸಿ, ಮಲ್ಲಿಕಾರ್ಜುನ ಅವರ ಖಾತೆಯಲ್ಲಿ ಲಾಭದ ಮೊತ್ತವನ್ನು ಕೋಟಿಗಟ್ಟಲೇ ತೋರಿಸಿದ್ದಾರೆ. ಅಲ್ಲದೆ, ಕೆಲವೊಮ್ಮೆ ಸಣ್ಣ ಮೊತ್ತದ ಹಣ ಹಿಂಪಡೆಯಲು ಅವಕಾಶ ನೀಡುವ ಮೂಲಕ ಅವರಲ್ಲಿ ವಿಶ್ವಾಸ ಮೂಡಿಸಲಾಗಿದೆ. ಅದನ್ನೇ ನಂಬಿದ ಮಲ್ಲಿಕಾರ್ಜುನ, ಹಂತ- ಹಂತವಾಗಿ 5.95 ಕೋಟಿ ರೂ. ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ.

ತೆರಿಗೆ ಪಾವತಿ ನೆಪದಲ್ಲಿ ಹೆಚ್ಚಿನ ಹಣಕ್ಕೆ ಬೇಡಿಕೆ- ವಂಚಕರು ಹೇಳಿದಂತೆ ಹಂತ-ಹಂತವಾಗಿ 5-9 ಕೋಟಿ ರೂ. ಹೂಡಿಕೆ ಮಾಡಿದಾಗ ಟ್ರೇಡಿಂಗ್ ಖಾತೆಯಲ್ಲಿ ಅಂದಾಜು 50 ಕೋಟಿ ರೂ. ಅಧಿಕ ಲಾಭ ತೋರಿಸಿದೆ. ಸಂತಸದಿಂದ ಹಣ ಹಿಂಪಡೆಯಲು ಯತ್ನಿಸಿದಾಗ ತೆರಿಗೆ ಪಾವತಿಸಬೇಕು ಎಂದು ಹೇಳಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ವಂಚಕರ ಅಸಲಿ ಮುಖವಾಡ ಬಯಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಮಲ್ಲಿಕಾರ್ಜುನ ಠಾಣೆಗೆ ದೂರು ನೀಡಿದ್ದಾರೆ ಎಂದು ಸೈಬರ್ ಕ್ರೈಂ ಠಾಣೆ ಪೊಲೀಸರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *