ಪುಣೆ: ಗುಜರಾತ್ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ “ಬ್ಲ್ಯಾಕ್ ಬಾಕ್ಸ್’ ಅನ್ನು ವಿಮಾನಗಳ ಅಪಘಾತ ತನಿಖಾ ದಳ(ಎಎಐಬಿ) ತಪಾಸಣೆ ನಡೆಸಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ತಿಳಿಸಿದ್ದು, ತನಿಖೆಗಾಗಿ ಬ್ಲ್ಯಾಕ್ ಬಾಕ್ಸ್‌ನ್ನು ವಿದೇಶಕ್ಕೆ ಕಳುಹಿಸುವ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.
ಜೂ.12ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಕೆಲವೇ ಕ್ಷಣದಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ 270 ಮಂದಿ ಮೃತಪಟ್ಟಿದ್ದರು.
ಅಪಘಾತದ ಮಾರನೇ ದಿನ ಘಟನಾ ಸ್ಥಳದಲ್ಲಿ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿತ್ತು. ಬ್ಲ್ಯಾಕ್ ಬಾಕ್ಸ್ ಸಣ್ಣ ಸಾಧನವಾಗಿದ್ದು ವಿಮಾನ ಹಾರಾಟದ ವೇಳೆ ಇದು ಮಾಹಿತಿಯನ್ನು ದಾಖಲಿಸುತ್ತದೆ. ವಿಮಾನ ಅಪಘಾತದ ವೇಳೆ ಇದು ತನಿಖೆಗೆ ಸಹಾಯ ಮಾಡುತ್ತದೆ.