ಉಡುಪಿ: ಬೈರಂಪಳ್ಳಿ ಗ್ರಾಪಂ ಪಿಡಿಓ ವರ್ಗಾಯಿಸಲು ಹುನ್ನಾರ; ಪ್ರಾಮಾಣಿಕ ಪಿಡಿಓರನ್ನು ವರ್ಗಾಯಿಸದಂತೆ ಗ್ರಾಮಸ್ಥರ ಒತ್ತಾಯ

Share with

ಉಡುಪಿ: ಉಡುಪಿ ತಾಲೂಕಿನ ಬೈರಂಪಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮನಾ ಅವರನ್ನು ಬೇರೆಡೆಗೆ ವರ್ಗಾಯಿಸುವ ಹುನ್ನಾರ ನಡೆದಿದೆ. ಅವರನ್ನು ಎಲ್ಲಿಗೂ ವರ್ಗಾಯಿಸದೆ ತಮ್ಮ ಪಂಚಾಯತ್ ನಲ್ಲೇ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒಟ್ಟಾಗಿ ಒತ್ತಾಯಿಸಿದ್ದಾರೆ.

ಅಧಿಕಾರಿ ಸುಮನಾ ಅವರನ್ನು ಎಲ್ಲಿಗೂ ವರ್ಗಾಯಿಸದೆ ತಮ್ಮ ಪಂಚಾಯತ್ ನಲ್ಲೇ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒಟ್ಟಾಗಿ ಒತ್ತಾಯಿಸಿದ್ದಾರೆ.

ಪ್ರಾಮಾಣಿಕ ಪಿಡಿಓ ಸುಮನಾ ಅವರನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬೇರೆಡೆಗೆ ವರ್ಗಾಯಿಸಲು ಪ್ರಯತ್ನಿಸುತ್ತಿವೆ. ಅವರು ಪಂಚಾಯತ್ ನಲ್ಲಿ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾನೂನುಬಾಹಿರ ಕೆಲಸಗಳಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಮಾತ್ರವಲ್ಲ, ಗ್ರಾಮಸ್ಥರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಕೆಲಸ ಮಾಡಿ ಕೊಡುತ್ತಿದ್ದಾರೆ. ಇದನ್ನು ಸಹಿಸದ ಕೆಲವು ಶಕ್ತಿಗಳು ಅವರಿಗೆ ಬೇರೆ ಬೇರೆ ರೀತಿಯಲ್ಲಿ ನಿಂದಿಸಿ, ಶೋಷಣೆ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಬಂಧಪಟ್ಟವರು ಇದನ್ನು ಪರಿಶೀಲಿಸಿ ಸತ್ಯಾಸತ್ಯತೆ ಅರಿತುಕೊಳ್ಳಬೇಕು. ಗ್ರಾಮಸ್ಥರಿಗೆ ಯಾವುದೇ ರೀತಿಯಲ್ಲೂ ಸರಕಾರಿ ಕೆಲಸಗಳಿಗೆ ಕಾಯಿಸದೆ, ಸತಾಯಿಸದೆ ಜನಸೇವೆ ಮಾಡುತ್ತಿರುವ ಪಿಡಿಓ ಅವರನ್ನು ವರ್ಗಾಯಿಸಕೂಡದು ಎಂದು ಗ್ರಾಮದ ಮಹಿಳೆಯರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *