ಮುಂಬರುವ ಆ. 1 ರಿಂದ ರೈಲ್ವೆ ನಿಲ್ದಾಣಗಳ ಮೀಸಲಾತಿ ಕೌಂಟರ್‌ಗಳಲ್ಲಿ ತತ್ಕಾಲ್ ಟಿಕೆಟ್ ಪಡೆಯುವ ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆ ‘ಟೋಕನ್ ವಿತರಣೆ’ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ. ಟೋಕನ್ ನೀಡುವ ಸಮಯ ಮತ್ತು ಬುಕಿಂಗ್ ಆರಂಭವಾಗುವ ಸಮಯವನ್ನು ಒಂದೇ ಬಾರಿಗೆ ಸಂಯೋಜಿಸಲಾಗಿದೆ.

ಇದರಿಂದಾಗಿ ಪ್ರಯಾಣಿಕರು ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವುದು ತಪ್ಪಲಿದೆ. ಜೊತೆಗೆ ಭೌತಿಕ ಕೌಂಟರ್‌ಗಳಲ್ಲಿ ಕಾಳಸಂತೆಯನ್ನು ತಡೆಯಲು ಇದು ನೆರವಾಗಲಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.




