ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಕಳೆದ 45 ವರ್ಷಗಳಿಂದ ಪ್ರತೀ ಶುಕ್ರವಾರ ಮತ್ತು ಪರ್ವದಿನಗಳಲ್ಲಿ ಭಜನಾ ಕಾರ್ಯಕ್ರಮದ ಮೂಲಕ ಶ್ರೀ ದೇವಿಯ ಸೇವೆ ಮಾಡುತ್ತಿರುವ ಐಲ ಶ್ರೀ ದುರ್ಗಾಪರಮೇಶ್ವರೀ ಕಲಾಸಂಘದ ನೇತೃತ್ವದಲ್ಲಿ ವಿವಿಧ ಭಜನಾ ತಂಡಗಳ ಸಹಕಾರದಿಂದ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಭಜನೋಟ್ಸವ ಕಾರ್ಯಕ್ರಮ ಈ ವರ್ಷ 45ನೇ ಭಜನೋತ್ಸವ ಮಾ.29ರಂದು ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.
ಬೆಳಿಗ್ಗೆ 6.30ಕ್ಕೆ ಕ್ಷೇತ್ರದ ಪ್ರಧಾನ ಅರ್ಚಕರ ಉಪಸ್ಥಿತಿಯಲ್ಲಿ ಕ್ಷೇತ್ರದ ಮಾಜಿ ಮೊಕ್ತೇಸರ ತಿಮ್ಮಪ್ಪ ಭಂಡಾರಿ ಬೊಳುವಾಯಿ ದೀಪ ಪ್ರಜ್ವಲನೆಗೊಳಿಸಿ ಭಜನೆಗೆ ಚಾಲನೆ ನೀಡುವರು.