
ಬೆಂಗಳೂರು : ಬೆಂಗಳೂರಿನಲ್ಲಿ ವರುಣನ ಸಿಂಚನವಾಗಿದೆ. ಬಿಸಿಲಿನಿಂದ ತತ್ತರಿಸಿದ್ದ ರಾಜಧಾನಿಯ ಜನತೆಗೆ ವರುಣ ದೇವ ಕೃಪೆ ತೋರಿದ್ದಾನೆ. ಮೆಜೆಸ್ಟಿಕ್, ರಾಜಾಜಿನಗರ, ವೈಟ್ ಫೀಲ್ಡ್, ಕೆಆರ್ ಪುರಂ, ರೇಸ್ ಕೋರ್ಸ್, ಚಾಲುಕ್ಯ ಸರ್ಕಲ್, ಬೆಂಗಳೂರು ದಕ್ಷಿಣ ಭಾಗದಲ್ಲಿ ಮಳೆಯಾಗುತ್ತಿದೆ. ಇನ್ನು, ನಗರದ ಹಲವೆಡೆ ಮೋಡ ಮುಸುಕಿದ ವಾತಾವರಣವಿದೆ. ಹೀಗಾಗಿ, ಯಾವುದೇ ಕ್ಷಣದಲ್ಲಿ ಜೋರು ಮಳೆಯಾಗುವ ಸಾಧ್ಯತೆಯಿದೆ. ಹಲವೆಡೆ, ಗುಡುಗು ಸಿಡಿಲಿನ ಆರ್ಭಟ ಕೂಡ ಜೋರಾಗಿದೆ ಎಂದು ವರದಿಯಾಗಿದೆ.





