
ಬಂದ್ಯೋಡು: ಕುಬಣೂರು ಬಳಿಯ ಒಡ್ಡಂಬೆಟ್ಟು ನಿವಾಸಿ ಗಣಪತಿ ಆಚಾರ್ಯ [೭೫] ಅಲ್ಪ ಕಾಲದ ಅಸೌಖ್ಯದಿಂದ ಜುಲೈ 4ರಂದು ಮಧ್ಯಾಹ್ನ ನಿಧನರಾದರು. ಇವರು ಬಡಗಿ ವೃತ್ತಿಯನ್ನು ನಡೆಸುತ್ತಿದ್ದರು. ಮೃತರು ಪತ್ನಿ ಯಮುನ, ಮಕ್ಕಳಾದ ಶೋಭಾ, ಶಿವಪ್ರಸಾದ್ ಆಚಾರ್ಯ, ಕಿರಣ ಆಚಾರ್ಯ, ಅಳಿಯಂದಿರಾದ ಪುರೋಹಿತ ಧರ್ಮೇಂದ್ರ ಆಚಾರ್ಯ ದುರ್ಗಿಪಳ್ಳ, ಮನುಪ್ರಸಾದ್ ಆಚಾರ್ಯ ಬೀರಮಲೆ ಪುತ್ತೂರು, ಸಹೋದರ ಸಹೋದರಿಯರಾದ ಜನಾರ್ಧನ ಆಚಾರ್ಯ, ರಾಮಕೃಷ್ಣ ಆಚಾರ್ಯ, ಗೋಪಾಲಕೃಷ್ಣ ಆಚಾರ್ಯ, ರತ್ನಾವತಿ, ರೋಹಿಣಿ, ನಿರ್ಮಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಪುತ್ರಿ ಜಯಂತಿ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಅಂತ್ಯಸAಸ್ಕಾರ ಸಂಜೆ ಚೆರುಗೋಳಿ ಹಿಂದೂರುದ್ರ ಭೂಮಿಯಲ್ಲಿ ನಡೆಯಿತು.





