ಟ್ರೆಕ್ಕಿಂಗ್ ಹೋಗಿದ್ದ ವ್ಯಕ್ತಿ 350 ಅಡಿ ಆಳದ ಕಂದಕಕ್ಕೆ ಬಿದ್ದು ಸಾವು

Share with

ತನ್ನ ಹುಟ್ಟುಹಬ್ಬವನ್ನು ಆಚರಿಸಲು ಸ್ನೇಹಿತರ ಜತೆ ಟ್ರೆಕ್ಕಿಂಗ್‌ಗೆ ಹೋಗಿದ್ದ ಯುವಕನೊಬ್ಬ ಆಳವಾದ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಲೋನಾವಾಲಾದ ಪ್ರಸಿದ್ಧ ಲೋಹಗಢ ಕೋಟೆಯಲ್ಲಿ ನಡೆದಿದೆ. ಮೃತರನ್ನು ಗಾಹುಂಜೆಯ ಲೋಧಾ ಬೆಲ್ಮಂಡೋ ಸೊಸೈಟಿಯ ನಿವಾಸಿ ಕೇತನ್ ವಿಶಾಲ್ ಅಗರ್ವಾಲ್ (24) ಎಂದು ಗುರುತಿಸಲಾಗಿದೆ.

ಪುಣೆ ಜಿಲ್ಲೆಯ ಲೋನಾವಾಲ ಬಳಿಯ ಮಲವಲಿಯ ಲೋಹಗಡ್ ಕೋಟೆಗೆ ತನ್ನ ಸ್ನೇಹಿತನೊಂದಿಗೆ ಚಾರಣಕ್ಕೆ ಹೋಗಿದ್ದ ವೇಳೆ ಈ ದುರಂತ ನಡೆದಿದೆ.


Share with

Leave a Reply

Your email address will not be published. Required fields are marked *