ಗರಿ ಗರಿ ನೋಟುಗಳಿಂದ ಬನಶಂಕರಿ ದೇವಿಗೆ ವಿಶೇಷ ಅಲಂಕಾರ

Share with

ಬನಶಂಕರಿ : ಇಂದು ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಹೀಗಾಗಿ ಬೆಂಗಳೂರಿನಲ್ಲಿ ಬನಶಂಕರಿ ದೇವಿಗೆ ನೋಟುಗಳಿಂದ ಅಲಂಕಾರ ಮಾಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಬನಶಂಕರಿ ಅಮ್ಮನವರಿಗೆ ಒಂದು ಲಕ್ಷ ರೂ. ಹಣದಿಂದ ವಿಶೇಷ ಅಲಂಕಾರ ಮಾಡಲಾಗಿದೆ. ತುಪ್ಪದ ದೀಪ ಹಚ್ಚಿ, ಬಾಗಿನ ಕೊಟ್ಟು ಭಕ್ತಾದಿಗಳು ಸಂಭ್ರಮಿಸಿದ್ದಾರೆ.

ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಮನೆ ಮನಗಳಲ್ಲೂ ಕಳೆಗಟ್ಟಿದೆ. ದೇಗುಲಗಳಂತೂ ಹೂಗಳಿಂದ ಝಗಮಗ ಅಂತಿವೆ. ಅದರಲ್ಲೂ ಬೆಂಗಳೂರಿನಲ್ಲಿ ಬನಶಂಕರಿ ದೇವಿಗೆ ಮಾಡಿದ್ದ ನೋಟುಗಳ ಅಲಂಕಾರ ಎಲ್ಲರ ಗಮನ ಸೆಳೆದಿದೆ.
ದೇವಿಯ ಹಿಂಬದಿ ಹಾಗೂ ಅಕ್ಕಪಕ್ಕ ನೋಟುಗಳಿಂದ ಅಲಂಕಾರ ಮಾಡಿದ್ದು, ಭಕ್ತರು ಬೆಳಗ್ಗೆಯಿಂದಲೇ ದೇಗುಲಕ್ಕೆ ಆಗಮಿಸಿ ದೇವಿಯನ್ನ ಕಣ್ತುಂಬಿಕೊಂಡಿದ್ದಾರೆ.
ಬನಶಂಕರಿ ಅಮ್ಮನವರಿಗೆ ಒಂದು ಲಕ್ಷ ರೂ. ಹಣದಿಂದ ವಿಶೇಷ ಅಲಂಕಾರ ಮಾಡಲಾಗಿದೆ. 50, 10 ಮತ್ತು 20 ರೂ ಬಳಸಿಕೊಂಡು ಅಲಂಕಾರ ಮಾಡಿ ಬಳಿಕ ದೇವರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತದಿಗಳು ಆಗಮಿಸುತ್ತಿದ್ದು, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ, ಬಾಗಿನ ಕೊಟ್ಟು ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮಿಸಿದ್ದಾರೆ.


Share with

Leave a Reply

Your email address will not be published. Required fields are marked *