ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ   ಗೌರವಿಸುವ  ಕಾರ್ಯಕ್ರಮ

Share with


ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವೆಸ್ಟ್ ಯೂನಿಟ್ ಇದರ ವತಿಯಿಂದ  19.8.2024 ರಂದು ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ 5 ದಶಕಗಳಿಂದ ಛಾಯಾಗ್ರಹಣ ಅನುಬಂಧ ವೃತ್ತಿಯಲ್ಲಿ ತೊಡಗಿಸಿಕೊಂಡು ಬರುತ್ತಿರುವ ಕಾಸರಗೋಡು ಚಂದ್ರಗಿರಿಯ ಬಳಿಯ ಕುನ್ನುಮಲ್ ನಿವಾಸಿ ನಾರಾಯಣನ್ ರಾಮನ್ಸ್ ಸ್ಟುಡಿಯೋ ಅವರನ್ನು ಎಕೆಪಿಎ ಕಾಸರಗೋಡು ವಲಯ ಅಧ್ಯಕ್ಷರಾದ ವಾಸು.ಎ ಅವರು ಶಾಲು ಹೊದಿಸಿ, ಯೂನಿಟ್ ಅಧ್ಯಕ್ಷ ಮೈಂದಪ್ಪ ಕೆ.ಎಂ ಅವರು ಸ್ಮರಣಿಕೆ ನೀಡಿ ಗೌರವಿಸಲಾಯಿತು.*
ಗೌರವ ಸ್ವೀಕರಿಸಿ ತಮ್ಮ 50 ವರ್ಷಗಳ ವೃತ್ತಿ ಜೀವನದ ನೆನಪುಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಎಕೆಪಿಎ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ ರತೀಶ್ ರಾಮು ವಿಡಿಯೋ, ವಲಯ ಪಿಆರ್ ಒ ಚಂದ್ರಶೇಖರ. ಎಂ, ಯೂನಿಟ್ ನಿರೀಕ್ಷಕ ಪ್ರಮೋದ್ ಐಫೋಕಸ್, ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ, ಉಪಾಧ್ಯಕ್ಷ ಹಾಗೂ ಸಾಂತ್ವನ  ಕೋರ್ಡಿನೇಟರ್ ಗಣೇಶ್ ರೈ, ಪಿಆರ್ ಒ ಸುಬ್ರಹ್ಮಣ್ಯ ವಿಡಿಯೋನಿಕ್ಸ್, ಉಪಸ್ಥಿತರಿದ್ದರು.*


Share with

Leave a Reply

Your email address will not be published. Required fields are marked *