
ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ದಿ.03..10.2024 ರಂದು ಆರಂಭಗೊoಡ ನವರಾತ್ರಿ ಮಹೋತ್ಸವ ದಿ.12.10.2024 ವಿಜಯದಶಮಿಯಂದು ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊoಡಿತು. ಪ್ರಾತ:ಕಾಲದಲ್ಲಿ ಶ್ರೀದೇವರಿಗೆ 108 ಸೀಯಾಳಾಭಿಷೇಕ, ಬೆಳಗ್ಗಿನ ಪೂಜೆಯು ನಂತರ ತೆನೆಪೂಜೆ, ವಿದ್ಯಾರಂಭ, ವಾಹನಪೂಜೆಗಳು ನಡೆದವು. ಬಳಿಕ ಕು.ಗಾಯತ್ರಿ ಮತ್ತು ಕು. ಶ್ರಾವಣ್ಯ ಕೊಂಡೆವೂರು ಇವರ “ಶಾಸ್ತ್ರೀಯ ಸಂಗೀತ ಕಾರ್ಯಕ್ರಮ” ಹಾಗೂ ಸವಿಜೀವನಂ ನೃತ್ಯ ಕಲಾಕ್ಷೇತ್ರ ಕೊಂಡೆವೂರು ಇದರ ವಿದ್ಯಾರ್ಥಿಗಳಿಂದ ವಿದುಷಿ ಸವಿತಾಜೀವನ್ ಇವರ ನಿರ್ದೇಶನದಲ್ಲಿ “ಭರತನಾಟ್ಯ” ಕಾರ್ಯಕ್ರಮ ವೈವಿಧ್ಯ ಪ್ರದರ್ಶನಗೊಂಡಿತು. ಮಧ್ಯಾಹ್ನ ಪೂಜೆಯ ನಂತರ ಶ್ರೀ ಮಠದ ನಕ್ಷತ್ರವನದಲ್ಲಿರುವ ಆನಂದತೀರ್ಥ ಪುಷ್ಕರಿಣಿಯಲ್ಲಿ ಶ್ರೀ ಶಾರದಾ ವಿಸರ್ಜನೆ ಬಹಳ ವಿಜೃಂಭಣೆಯಿoದ ನಡೆಯಿತು. ಬಳಿಕ ಪೂಜ್ಯರು ಭಕ್ತಾದಿಗಳಿಗೆ ಮಂಗಲಮoತ್ರಾಕ್ಷತೆ ಅನುಗ್ರಹಿಸುವುದರೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊoಡವು.





