ಪ್ರತಾಪನಗರದಲ್ಲಿ ಸಾಮೂಹಿಕ ಗೋಪೂಜೆ

Share with


ಮಂಗಲ್ಪಾಡಿ: ಗ್ರಾಮ ವಿಕಾಸ ಸಮಿತಿ ಪ್ರತಾಪನಗರ ಇದರ ಆಶ್ರಯದಲ್ಲಿ ಸಾಮೂಹಿಕ ಗೋಪೂಜೆ ಇಲ್ಲಿನ ಗಣೇಶ ಮಂದಿರದಲ್ಲಿ ಶನಿವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಬೆಳಿಗ್ಗೆ ಗಣಹೋಮ, ಸಂಜೆ ಭಜನೆ ಬಳಿಕ ಗೋವುಗಳಿಗೆ  ಮಾತೆಯರು ತುಳಸೀ ಮಾಲೆ ಹಾಕಿ ಆರತಿ ಬೆಳಗಿ ಗೋಪೂಜೆಯನ್ನು  ಆಚರಿಸಲಾಯಿತು. ಮಾತೆಯರ ಸಹಿತ ಭಾರೀ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಲಘು ಉಪಹಾರವನ್ನು ವಿತರಿಸಲಾಯಿತು. ಗ್ರಾಮ ವಿಕಾಸ ಸಮಿತಿ, ಶ್ರೀ ಗಣೇಶ ಮಂದಿರ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ನೇತೃತ್ವ ನೀಡಿದರು.


Share with

Leave a Reply

Your email address will not be published. Required fields are marked *