
ಬೆಂಗಳೂರು: ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಜಾಲಹಳ್ಳಿ ನಿಲ್ದಾಣದಲ್ಲಿ ಸೋಮವಾರ ಬಿಹಾರದ ವ್ಯಕ್ತಿ ಅನಿಲ್ ಕುಮಾರ್ ಪಾಂಡೆ (49) ಹಳಿಗೆ ಹಾರಿದ್ದು, ಮೆಟ್ರೊ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇದರಿಂದ 25 ನಿಮಿಷ ಮೆಟ್ರೊ ಸಂಚಾರ ವ್ಯತ್ಯಯ ಉಂಟಾಯಿತು.

ಬೆಳಿಗ್ಗೆ 10.25ಕ್ಕೆ ಮೆಟ್ರೊ ರೈಲು ಜಾಲಹಳ್ಳಿ ನಿಲ್ದಾಣಕ್ಕೆ ಬರುವ ವೇಳೆ ಹಾರಿದ್ದರು. ಕೂಡಲೇ ಸಿಬ್ಬಂದಿ ಇಟಿಎಸ್ (ಎಮರ್ಜನ್ಸಿ ಟ್ರಿಪ್ ಸಿಸ್ಟಮ್) ಆಫ್ ಮಾಡಿ ಮೆಟ್ರೊ ಸಂಚಾರ ಸ್ಥಗಿತಗೊಳಿಸಿದರು. ಪಾಂಡೆಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರು. ಪಾಂಡೆಗೆ ಸಣ್ಣ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯಿಂದ 10.25ರಿಂದ ಮೆಟ್ರೊ 10.50ರ ವರೆಗೆ ಸಂಚಾರ ವ್ಯತ್ಯಯ ಆಯಿತು.




