ಇನ್ಮುಂದೆ ಎಟಿಎಂನಲ್ಲಿ ಬ್ಯಾಲನ್ಸ್ ಪರಿಶೀಲಿಸಿದರೂ ಶುಲ್ಕ

Share with

ಇನ್ಮುಂದೆ ಎಟಿಎಂ ಇಂಟರ್ಚೇಂಜ್ ದರಗಳು ಹೆಚ್ಚಾಗಲಿವೆ. ಶುಲ್ಕಗಳ ಹೆಚ್ಚಳಕ್ಕೆ ಆರ್ಬಿಐ ಅನುಮೋದನೆ ನೀಡಿದೆ. ಮೇ 1ರಿಂದ ಹೊಸ ಶುಲ್ಕಗಳು ಜಾರಿಗೆ ಬರಲಿವೆ. ಬೇರೆ ಬ್ಯಾಂಕ್ಗಳ ಎಟಿಎಂಗಳಲ್ಲಿ ನಿಗದಿ ಮಾಡಿದ ಮಿತಿಗಿಂತ ಹೆಚ್ಚು ಸಂಖ್ಯೆಯಲ್ಲಿ ವಹಿವಾಟು ಮಾಡಿದರೆ ಆಗ ಪ್ರತೀ ಹೆಚ್ಚುವರಿ ವಹಿವಾಟಿಗೂ ಶುಲ್ಕ ವಿಧಿಸಲಾಗುತ್ತದೆ.

ಬ್ಯಾಲನ್ಸ್ ಪರಿಶೀನೆ, ಸ್ಟೇಟ್ಮೆಂಟ್ ಪಡೆಯುವುದು ಇತ್ಯಾದಿ ಹಣಕಾಸು ಅಲ್ಲದ ವಹಿವಾಟಿಗೆ ಶುಲ್ಕವನ್ನು ಒಂದು ರೂ.ನಷ್ಟು ಏರಿಸಲಾಗಿದೆ. ಒಂದು ತಿಂಗಳಲ್ಲಿ ಸಾಮಾನ್ಯವಾಗಿ 3 ರಿಂದ 5 ಬಾರಿ ಮಾತ್ರ ನೀವು ಬೇರೆ ಬ್ಯಾಂಕ್ ಎಟಿಎಂನಲ್ಲಿ ವಹಿವಾಟು ನಡೆಸಬಹುದು. ಅದನ್ನು ಮೀರಿದರೆ, ಆಗ ಆ ಬ್ಯಾಂಕ್ನವರು ನಿಮ್ಮ ಬ್ಯಾಂಕ್ಗೆ ಇಂಟರ್ಚೇಂಜ್ ಫೀ ವಿಧಿಸುತ್ತವೆ. ಆರ್ಬಿಐ ಇದೇ ಇಂಟರ್ಚೇಂಜ್ ಫೀ ಅನ್ನು ಈಗ ಹೆಚ್ಚಿಸಿರುವುದು.ವಹಿವಾಟು ಸಂಖ್ಯೆ ಮಿತಿ ಮೀರಿದ ಬಳಿಕ ಪ್ರತಿಯೊಂದು ಕ್ಯಾಷ್ ವಿತ್ಡ್ರಾಲ್ಗೂ ಇಂಟರ್ಚೇಂಜ್ ಶುಲ್ಕ 17 ರೂನಿಂದ 19 ರೂ.ಗೆ ಹೆಚ್ಚಿಸಲಾಗಿದೆ.


Share with

Leave a Reply

Your email address will not be published. Required fields are marked *