ಅಧ್ಯಕ್ಷರಾಗಿ ಸಂದೀಪ್ ಕೃಷ್ಣಪ್ಪ
ಉಪಾಧ್ಯಕ್ಷರಾಗಿ ಕವಿರಾಜ್ ಬಂಗೇರ
ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ರಘುನಾಥ್
ದೋಹಾ, ಕತಾರ್: ಭಾರತೀಯ ಸಾಂಸ್ಕೃತಿಕ ಕೇಂದ್ರ (ICC), ದೋಹಾ, ಕತಾರ್‌ನ ಸಹಯೋಗಿ ಸಂಸ್ಥೆಯಾದ ಬಿಲ್ಲವಾಸ್ ಕತಾರ್ ತನ್ನ 2026-28ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಸೆ. 18 ರಂದು ರಚಿಸಲಾಯಿತು.
ಕತಾರ್‌ನಲ್ಲಿ ಕನ್ನಡಿಗರ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಸಮುದಾಯ ಚಟುವಟಿಕೆಗಳಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಬಿಲ್ಲವಾಸ್ ಕತಾರ್, ಮುಂದಿನ ಎರಡು ವರ್ಷಗಳ ಅವಧಿಗೆ ಉತ್ಸಾಹಭರಿತ ಹಾಗೂ ಸಮರ್ಪಿತ ತಂಡವನ್ನು ಆಯ್ಕೆ ಮಾಡಿದೆ. ನೂತನ ಸಮಿತಿಯು ಸಂಸ್ಥೆಯ ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ, ಸದಸ್ಯರ ಹಿತಾಸಕ್ತಿ ಮತ್ತು ಸಮುದಾಯದ ಅಭಿವೃದ್ಧಿಗೆ ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ.
ನೂತನ ಪದಾಧಿಕಾರಿಗಳು:
ಅಧ್ಯಕ್ಷರಾಗಿ ಸಂದೀಪ್ ಕೃಷ್ಣಪ್ಪ,
ಉಪಾಧ್ಯಕ್ಷರಾಗಿ ಕವಿರಾಜ್ ಬಂಗೇರ,
ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ರಘುನಾಥ್,
ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ವಿಜೇತ್ ಕರಂದೂರು ರಾಮಪ್ಪ,
ಖಜಾಂಚಿಯಾಗಿ ಮಧುರಾಜ್ ಕರ್ಕೇರ,
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿತೇಶ್ ರಮೇಶ್,
ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಸುಧಾ ಸಂದೀಪ್,
ಸದಸ್ಯತ್ವ ಸಂಯೋಜಕರಾಗಿ ನಿತಿನ್ ಸನಿಲ್,
ಕ್ರೀಡಾ ಕಾರ್ಯದರ್ಶಿಯಾಗಿ ಸಹನಾ ಬಂಗೇರ,
ಮಾಧ್ಯಮ ಸಂಯೋಜಕರಾಗಿ ಶಶಿಕಿರಣ್ ಪೋಲಾಲಿ,
ಲಾಜಿಸ್ಟಿಕ್ಸ್ ಸಂಯೋಜಕರಾಗಿ ನಿತಿನ್ ಕುಮಾರ್ ಆಯ್ಕೆಯಾಗಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮಾಜಿಕ ಚಟುವಟಿಕೆಗಳು, ಕ್ರೀಡಾ ಕಾರ್ಯಕ್ರಮಗಳು ಹಾಗೂ ಸಮುದಾಯಮುಖಿ ವಿವಿಧ ಉಪಕ್ರಮಗಳ ಮೂಲಕ ಸದಸ್ಯರನ್ನು ಇನ್ನಷ್ಟು ಒಗ್ಗೂಡಿಸಿ, ಕತಾರ್‌ನಲ್ಲಿರುವ ಬಿಲ್ಲವ ಸಮುದಾಯದ ಸೌಹಾರ್ದತೆ ಮತ್ತು ಸಾಂಸ್ಕೃತಿಕ ಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ನೂತನ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಸಂಘಟನೆ ತಿಳಿಸಿದೆ.




