
ಉಡುಪಿ: ಲಿಂಕ್ ಒಂದನ್ನು ಕ್ಲಿಕ್ ಮಾಡಿ ವ್ಯಕ್ತಿಯೊಬ್ಬರು ಲಕ್ಷಗಟ್ಟಲೆ ಹಣವನ್ನು ಕಳೆದುಕೊಂಡಿರುವ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

ಇ-ಮೇಲ್ ಗೆ ಬಂದಂತಹ ಲಿಂಕೊಂದನ್ನು ಕ್ಲಿಕ್ ಮಾಡಿ ಉಡುಪಿಯ ದಿಲೀಪ್ ಎಂಬುವರು ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರಕ್ಕೂ ಅಧಿಕ ಮೊತ್ತವನ್ನು ಕಳೆದುಕೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ನ ಚಂದಾ ಮುಗಿದುಹೋಗಿರುವ ಬಗ್ಗೆ ಉಡುಪಿಯ ದಿಲೀಪ್ ಅವರ -ಮೇಲ್‌ಗೆ ಎ.2ರಂದು ಸಂದೇಶ ಬಂದಿತ್ತು. ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಚಂದಾ ಪಡೆಯಲು ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆಯಲು ಇನ್ನೊಂದು ಟ್ಯಾಬ್ ತೆರೆದಿದೆ. ಈ ವೇಳೆ ಅವರು ಐಸಿಐಸಿಐ ಕ್ರೆಡಿಟ್ ಕಾರ್ಡ್ ಸಂಖ್ಯೆ ನೀಡಿದಾಗ ಅವರ ಮೊಬೈಲ್‌ಗೆ ಒಟಿಪಿ ಬಂದಿದ್ದು, ಅದನ್ನು ನಮೂದಿಸಿದ್ದಾರೆ.
ಬಳಿಕ “ಸಮ್‌ಥಿಂಗ್ ವೆಂಟ್ ರಾಂಗ್’ ಎಂಬ ಸಂದೇಶ ಬಂದಿದೆ. ಪುನಃ ಮೊಬೈಲ್‌ಗೆ ಮತ್ತೊಂದು ಒಟಿಪಿ ಬಂದಿತ್ತು. ಈ ವೇಳೆ ದಿಲೀಪ್‌ಗೆ ಸಂದೇಹ ಬಂದಿದ್ದು, ಐಸಿಐಸಿಐ ಬ್ಯಾಂಕ್‌ನ ಹೆಲ್ಪ್‌ಲೈನ್ ಗೆ ಕರೆ ಮಾಡಿದಾಗ ಅವರ ಖಾತೆಯಿಂದ 1,29,944 ರೂ. ಅನಾಮಧೇಯ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ.




