ಮಸೂದೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ರಾಷ್ಟ್ರಪತಿಗಳಿಗೆ ಗಡುವು ನೀಡಿದ ಸುಪ್ರೀಂಕೋರ್ಟ್

Share with

ನವದೆಹಲಿ : ರಾಜ್ಯಪಾಲರು ಶಿಫಾರಸು ಮಾಡುವ ಮಸೂದೆಗಳ ಬಗ್ಗೆ ರಾಷ್ಟ್ರಪತಿಗಳು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ಹೇಳಿದೆ. ಬಾಕಿ ಇರುವ ಮಸೂದೆಗಳಿಗೆ ಮಂಗಳವಾರ ಅಂಕಿತ ಹಾಕುವುದನ್ನು ತಡೆಹಿಡಿಯುವ ತಮಿಳುನಾಡು ರಾಜ್ಯಪಾಲರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಈ ಆದೇಶವನ್ನು ಶುಕ್ರವಾರ ಸಾರ್ವಜನಿಕಗೊಳಿಸಲಾಗಿದೆ.

ತಮಿಳುನಾಡಿನ ರಾಜ್ಯಪಾಲ ಆರ್. ಎನ್ ರವಿ ಅವರು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯ್ದಿರಿಸಿದ್ದ ತಮಿಳುನಾಡಿನ 10 ಮಸೂದೆಗಳನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ 4 ದಿನಗಳ ನಂತರ ಈ ತೀರ್ಪು ಬಂದಿದೆ. 415 ಪುಟಗಳ ಪೂರ್ಣ ತೀರ್ಪನ್ನು ಶುಕ್ರವಾರ ರಾತ್ರಿ ತಡರಾತ್ರಿ 10:54 ಕ್ಕೆ ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.


Share with

Leave a Reply

Your email address will not be published. Required fields are marked *