

ಉಪ್ಪಳ: ಕಳೆದ 15 ವರ್ಷಗಳಿಂದ ಚೆರುಗೋಳಿ ರಸ್ತೆಯಲ್ಲಿಪಂಚಾಯತ್ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಉಪ್ಪಳ ಅಗ್ನಿಶಾಮಕ ದಳಕ್ಕೆ ಮಂಗಲ್ಪಾಡಿ ಪಂಚಾಯತ್ನ ಪ್ರತಾಪನಗರದ 7ನೇ ವಾರ್ಡ್ ಗುಳಿಗ ಬನದ ಪರಿಸರದಲ್ಲಿ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ.
ಕಳೆದ ಒಂದು ತಿಂಗಳ ಹಿಂದೆ ಕಾಮಗಾರಿ ಆರಂಭಗೊoಡಿದ್ದು, ಅತೀ ವೇಗವಾಗಿ ಕಟ್ಟಡ ನಿರ್ಮಾಣ ಕೆಲಸಗಳು ನಡೆಯುತ್ತಿದೆ.
ಇದೀಗ ಕಾರ್ಯಚರಿಸುತ್ತಿರುವ ಕೇಂದ್ರ 2010 ಎಪ್ರಿಲ್ ತಿಂಗಳಲ್ಲಿ ಆರಂಭಗೊoಡಿದೆ. ಇಲ್ಲಿ ಸೌಕರ್ಯದ ತೀರ ಕೊರತೆ ಉಂಟಾಗಿದ್ದು, ಇದರಿಂದ ಅಧಿಕಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಇದೀಗ ನಿರ್ಮಾಣಗೊಳ್ಳುತ್ತಿರುವ ಎರಡು ಹಂತಸ್ತಿನ ಕಟ್ಟಡದಲ್ಲಿ ಕಚೇರಿ, ಶೆಡ್ಡ್, ಗ್ಯಾರೇಜ್, ವಿಶ್ರಾಂತಿ ಕೊಠಡಿ ಮೊದಲಾದ ಸೌಕರ್ಯಗಳನ್ನು ಹೊಂದಿದ್ದು, ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಪೂರ್ತಿಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




