
ಕಾಸರಗೋಡು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವಿಜಯ್ ಭರತ್ ರೆಡ್ಡಿ ರವಿವಾರ ಅಧಿಕಾರ ಸ್ವೀಕರಿಸಿದರು.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ರೆಡ್ಡಿ ರವರನ್ನು ಎಎಸ್ಪಿ ಪಿ . ಬಾಲಕೃಷ್ಣನ್ ನಾಯರ್ ಬರಮಾಡಿಕೊಂಡರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಗಿದ್ದ ಡಿ.ಶಿಲ್ಪಾ ರವರಿಗೆ ಸಿಬಿಐ ಗೆ ನೇಮಕಾತಿ ಲಭಿಸಿದ ಹಿನ್ನೆಲೆಯಲ್ಲಿ ತಿರುವನಂತಪುರ ಸಿಟಿ ಉಪ ಪೊಲೀಸ್ ಆಯುಕ್ತರಾಗಿದ್ಧ ರೆಡ್ಡಿ ರವರನ್ನು ಕಾಸರಗೋಡು ಎಸ್ಪಿ ಯಾಗಿ ನೇಮಿಸಲಾಗಿದೆ.
ಡಿವೈಎಸ್ಪಿ ಸಿ.ಕೆ ಸುನಿಲ್ ಕುಮಾರ್, ವಿ.ವಿ ಮನೋಜ್, ಬಾಬು ಪೆರಿಂಗೋತ್ , ಸ್ಪೆಷಲ್ ಬ್ರಾಂಚ್ ಡಿವೈ ಎಸ್ಪಿ ಎಂ. ಸುನಿಲ್ ಕುಮಾರ್ ಉಪಸ್ಥಿತರಿದ್ದರು.




