
ಬೆಳಿಗ್ಗೆ 7 ರಿಂದ 8 ಗಂಟೆಯೊಳಗೆ ಬೆಳಗಿನ ಉಪಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ನೀವು ತಡವಾಗಿ ಎದ್ದರೆ, ಎದ್ದ ಒಂದು ಗಂಟೆಯೊಳಗೆ ಉಪಹಾರವನ್ನು ಸೇವಿಸುವುದು ಉತ್ತಮ ಸಮಯ.

ಏಕೆಂದರೆ ರಾತ್ರಿ ಭೋಜನ ಬಳಿಕ ಹೊಟ್ಟೆ ದೀರ್ಘ ಕಾಲದವರೆಗೆ ಖಾಲಿ ಇರುವ ಕಾರಣ ನಮ್ಮ ದೇಹಕ್ಕೆ ಶಕ್ತಿಯ ಅಗತ್ಯವಿರುತ್ತದೆ. ಬೆಳಿಗ್ಗೆ ಗ್ಲೋಕೋಸ್ ಮಟ್ಟವು ಕಡಿಮೆಯಾಗುತ್ತದೆ.
ಬೆಳಗಿನ ಉಪಾಹಾರ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ದಿನವನ್ನು ಪ್ರಾರಂಭಿಸಲು ನಮಗೆ ಶಕ್ತಿಯನ್ನು ನೀಡುತ್ತದೆ.




