ಕಾಸರಗೋಡು: ಮತ್ತೆ ಜಲಾವೃತಗೊಂಡ ಮಧೂರು ದೇವಸ್ಥಾನ

Share with

ಕಾಸರಗೋಡು: ವರುಣನ ಅಬ್ಬರಕ್ಕೆ ಜಿಲ್ಲೆ ತತ್ತರಗೊಂಡಿದ್ದು,
ಮಧೂರು ಮದನಂತೇಶ್ವರ ವಿನಾಯಕ ದೇವಾಲಯ ಮತ್ತೆ ಜಲಾವೃತವಾಗಿದೆ. ರೆಡ್ ಅಲೆರ್ಟ್ ಘೋಷಣೆಯಾಗಿದ್ದು, ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿದೆ.

ಭಾನುವಾರ ಸುರಿದ ಬಿರುಸಿನ ಮಳೆಗೆ ಜಲಾಶಯಗಳು ತುಂಬಿ ಉಕ್ಕುತ್ತಿದ್ದು, ತಗ್ಗಿನ ಪ್ರದೇಶಗಳು ಜಲಾವೃತಗೊಂಡು ಪ್ರಧಾನ ವಾಹಿನಿಯ ಸಂಪರ್ಕ ಕಡಿದುಕೊಂಡಿವೆ. ಮಧೂರು, ಉಪ್ಪಳ ಪ್ರದೇಶಗಳಲ್ಲಿ ನೀರಿನ ಮಟ್ಟ ಅಪಾಯಕಾರಿಯಾಗಿ ಹರಿಯುತ್ತಿದ್ದು, ನಿವಾಸಿಗಳು ಜಾಗ್ರತೆ ವಹಿಸುವಂತೆ ವಿಪತ್ತು ನಿರ್ವಹಣೆ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ಬಹುತೇಕ ಒಳರಸ್ತೆಗಳು ನೀರು ತುಂಬಿ ಸಂಚಾರ ಮೊಟಕುಗೊಂಡಿವೆ. ಮಂಜೇಶ್ವರ, ಕಾಸರಗೋಡು, ಹೊಸದುರ್ಗ, ವೆಳ್ಳರಿಕುಂಡು ತಾಲ್ಲೂಕಿನಲ್ಲಿ ನೆರೆಹಾವಳಿ ಅಧಿಕ ಪ್ರಮಾಣದಲ್ಲಿದೆ.

ಮಧೂರು ದೇವಾಲಯ ಕಳೆದ ತಿಂಗಳು ಸುರಿದ ಮಳೆಗೆ ಜಲಾವೃತಗೊಂಡಿತ್ತು. ಈಗ ಮತ್ತೆ ನೀರು ತುಂಬಿಕೊಂಡಿದೆ. ಅನಿವಾರ್ಯ ಪೂಜೆಗಳಲ್ಲದೆ, ಸಾರ್ವಜನಿಕ ಸೇವೆ ನಡೆಯುತ್ತಿಲ್ಲ. ಪೋಡೋತುರ್ತಿ ಕಾಯಕ್ಕಿಲ್ ಭಗವತಿ ದೇವಾಲಯ ಜಲಾವೃತವಾಗಿದೆ. ಮಡಿಕೈ ತೀಯಾ‌ರ್ ನದಿ ಉಕ್ಕಿ ಹರಿಯುತ್ತಿದ್ದು, ಆಸುಪಾಸಿನ


Share with

Leave a Reply

Your email address will not be published. Required fields are marked *