ಅನಂತಪುರ ದೇವಸ್ಥಾನದಲ್ಲಿ ಸುಸಜ್ಜಿತ ಶ್ರೀ ಅನಂತ ಪಾಕಶಾಲೆ ಉದ್ಘಾಟನೆ

Share with

ಕಾಸರಗೋಡು: ಕುಂಬಳೆ ಅನಂತಪುರ ಶ್ರೀ ಅನಂತಪದ್ಮನಾಭ ಕ್ಷೇತ್ರದಲ್ಲಿ ದಿನ ನಿತ್ಯ ಅನ್ನಪ್ರಸಾದ ನಡೆಯುತ್ತಿದ್ದು, ಸಿಬ್ಬಂದಿ ವರ್ಗ, ಭಕ್ತ ಜನರ ಮತ್ತು ದೇವಸ್ವಂ ಬೋರ್ಡಿನ ಧನ ಸಹಾಯದೊಂದಿಗೆ ನಿರ್ಮಾಣಗೊಂಡ ಸುಸಜ್ಜಿತ ಶ್ರೀ ಅನಂತ ಪಾಕಶಾಲೆಯನ್ನು ಜೂ.16 ರಂದು ಧಾರ್ಮಿಕ ವಿಧಿವಿಧಾನಗಳ ಮೂಲಕ ಉದ್ಘಾಟಿಸಲಾಯಿತು. ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ ಪಾಕಶಾಲೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಕುಶಾಲಪ್ಪ ಪೂಜಾರಿ ಕಣ್ಣೂರು ವಹಿಸಿದ್ದರು.

ಕ್ಷೇತ್ರದ ತಂತ್ರಿಗಳಾದ ದೇಲಂಪಾಡಿ ಗಣೇಶ್ ತಂತ್ರಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅತಿಥಿಗಳಾಗಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೈ, ಅಭಯಾಂತರ ಸುಂದರ ಪುರುಷ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯ ಜನಾರ್ದನ ಪೂಜಾರಿ, ಆಡಳಿತ ಸಮಿತಿಯವರಾದ ಸತೀಶ್ ಪೂಜಾರಿ, ಹರೀಶ ಪೂಜಾರಿ, ಜಯಪ್ರಕಾಶ ಶೆಟ್ಟಿ, ಪ್ರಸಾದ್ ಕುಮಾರ್, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *